HomeIndiaಜಾರ್ಖಂಡ್ ಸಿಎಂ ಅಫಿಡವಿಟ್ ನಲ್ಲಿ ವಯಸ್ಸಿನ ಬಗ್ಗೆ ಸುಳ್ಳು ಮಾಹಿತಿ: ನಾಮಪತ್ರ ರದ್ದುಗೊಳಿಸಲು ಬಿಜೆಪಿ ಆಗ್ರಹ

ಜಾರ್ಖಂಡ್ ಸಿಎಂ ಅಫಿಡವಿಟ್ ನಲ್ಲಿ ವಯಸ್ಸಿನ ಬಗ್ಗೆ ಸುಳ್ಳು ಮಾಹಿತಿ: ನಾಮಪತ್ರ ರದ್ದುಗೊಳಿಸಲು ಬಿಜೆಪಿ ಆಗ್ರಹ

ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಬರ್ಹೈತ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.  ಅವರ ಅಫಿಡವಿಟ್ ನಲ್ಲಿ ವಯಸ್ಸಿನ ವ್ಯತ್ಯಾಸದ ಬಗ್ಗೆ ವಿವಾದ ಹುಟ್ಟುಹಾಕಿದೆ.

ಅಫಿಡವಿಟ್ ಪ್ರಕಾರ, ಸೋರೆನ್ ಅವರ ವಯಸ್ಸು ಐದು ವರ್ಷಗಳ ಅವಧಿಯಲ್ಲಿ 7 ವರ್ಷಗಳಷ್ಟು ಹೆಚ್ಚಾಗಿದೆ. ಅವರ 2019 ರ ನಾಮನಿರ್ದೇಶನದಲ್ಲಿ ಅವರ ವಯಸ್ಸನ್ನು 42 ವರ್ಷಗಳು ಎಂದು ಉಲ್ಲೇಖಿಸಲಾಗಿದೆ. ಆದರೆ, ಈ ವರ್ಷದ ದಾಖಲೆಯಲ್ಲಿ ಅವರಿಗೆ 49 ಎಂದು ತಿಳಿಸಲಾಗಿದೆ.

ಸೋರೆನ್ ಅವರ ವಯಸ್ಸಿನಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿ ಬಿಜೆಪಿ ಅವರ ನಾಮಪತ್ರವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದೆ. ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಹದೇವ್, ಐದು ವರ್ಷಗಳ ಅವಧಿಯಲ್ಲಿ ಒಬ್ಬರ ವಯಸ್ಸು ಏಳು ವರ್ಷಗಳು ಹೇಗೆ ಹೆಚ್ಚಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೊರೆನ್ ಅವರ ಆದಾಯವು 10 ಲಕ್ಷದಿಂದ 4 ಲಕ್ಷಕ್ಕೆ ಇಳಿಕೆಯಾಗುವ ಬಗ್ಗೆ ಬಿಜೆಪಿ ಅನುಮಾನಿಸಿದೆ. ಅಫಿಡವಿಟ್‌ನಲ್ಲಿ ಸೊರೇನ್ ಹಲವಾರು ಆಸ್ತಿಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಹೇಳಿದೆ. ಬಿಜೆಪಿ ಮುಖಂಡರು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular