HomeEntertainmentಮುರಿದು ಬಿದ್ದಿದೆ ಹೇಮಾಮಾಲಿನಿ ಪುತ್ರಿಯ ದಾಂಪತ್ಯ ಬದುಕು, ಪುಸ್ತಕದಲ್ಲಿ ಖುದ್ದು ಈ ವಿಷಯ ಬಿಚ್ಚಿಟ್ಟಿದ್ದಾರೆ ಇಶಾ...

ಮುರಿದು ಬಿದ್ದಿದೆ ಹೇಮಾಮಾಲಿನಿ ಪುತ್ರಿಯ ದಾಂಪತ್ಯ ಬದುಕು, ಪುಸ್ತಕದಲ್ಲಿ ಖುದ್ದು ಈ ವಿಷಯ ಬಿಚ್ಚಿಟ್ಟಿದ್ದಾರೆ ಇಶಾ ಡಿಯೋಲ್‌ !

ಚಿತ್ರರಂಗದಲ್ಲಿ ಪ್ರೀತಿ, ಮದುವೆ, ವಿಚ್ಛೇದನ ಇವೆಲ್ಲವೂ ಸರ್ವೇಸಾಮಾನ್ಯವಾಗಿಬಿಟ್ಟಿವೆ. ಸೆಲೆಬ್ರಿಟಿ ದಂಪತಿಗಳು ಕೆಲವೇ ವರ್ಷಗಳ ಬಳಿಕ ಪರಸ್ಪರ ದೂರವಾಗುವುದು, ವಿಚ್ಛೇದನ ಪಡೆಯುವುದು ಕೂಡ ಕಾಮನ್‌. ಇದೀಗ ಬಾಲಿವುಡ್‌ನ ಹಿರಿಯ ಧರ್ಮೇಂದ್ರ ಮತ್ತು ಕನಸಿನ ಕನ್ಯೆ ಹೇಮಾ ಮಾಲಿನಿ ಅವರ ಪುತ್ರಿ ಇಶಾ ಡಿಯೋಲ್ ಕೂಡ ಪತಿಯಿಂದ ದೂರವಾಗಿದ್ದಾರೆ.

ಇಶಾ ಡಿಯೋಲ್‌ ಹಾಗೂ ಭರತ್‌ ತಖ್ತಾನಿ ದಾಂಪತ್ಯ ಮುರಿದು ಬಿದ್ದಿದೆ. ಇವರ ಲವ್‌ ಸ್ಟೋರಿಯಂತೆಯೇ ಈಗ ಮದುವೆ ಮುರಿದು ಬಿದ್ದಿರೋ ಸಂಗತಿ ಕೂಡ ಬಹಳ ಚರ್ಚೆಯಾಗ್ತಿದೆ. ಈ ಕುರಿತಂತೆ ಇಶಾ ಡಿಯೋಲ್‌ ತಮ್ಮ ಪುಸ್ತಕದಲ್ಲಿ ಕೂಡ ಉಲ್ಲೇಖ ಮಾಡಿದ್ದಾರೆ.

ಎರಡನೇ ಮಗುವಿನ ಜನನದ ನಂತರ ತಾನು ತಾತ್ಸಾರ ಅನುಭವಿಸಿದ್ದಾಗಿ ಇಶಾ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇಶಾ ಮತ್ತು ಭರತ್ ತಖ್ತಾನಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ – ರಾಧ್ಯ ಮತ್ತು ಮಿರಾಯಾ. 2020 ರಲ್ಲಿ ಇಶಾ ‘ಅಮ್ಮ ಮಿಯಾ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪುಸ್ತಕದಲ್ಲಿ ಇಶಾ ತನ್ನ ಮತ್ತು ಭರತ್ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ಎರಡನೇ ಮಗುವಿನ ಜನನದ ನಂತರ ಭರತ್‌, ಇಶಾ ಮೇಲೆ ಕಿರಿಕಿರಿಗೊಳ್ಳುತ್ತಿದ್ದರಂತೆ. ತನಗೆ ಅಗತ್ಯವಿರುವ ಗಮನವನ್ನು ನೀಡುತ್ತಿಲ್ಲ ಎಂಬ ಭಾವನೆ ಅವರಲ್ಲಿತ್ತು. ಹೀಗಾಗುವುದು ಸಹಜ. ಯಾಕೆಂದರೆ ತಮ್ಮ ಹೆಚ್ಚಿನ ಸಮಯ ರಾಧ್ಯಾ ಮತ್ತು ಮಿರಾಯಾರ ಪೋಷಣೆಯಲ್ಲಿಯೇ ಕಳೆಯುತ್ತಿತ್ತು ಅಂತಾ ಇಶಾ ಬರೆದುಕೊಂಡಿದ್ದಾರೆ.

ಪತಿಯ ಬಟ್ಟೆ ಬರೆಗಳ ಬಗ್ಗೆ, ಊಟದ ಬಗ್ಗೆ ಕೂಡ ತಾನು ಗಮನಹರಿಸಿರಲಿಲ್ಲ ಅಂತ ಕೂಡ ಇಶಾ ಬರೆದಿದ್ದಾರೆ. ಅಷ್ಟೇ ಅಲ್ಲ ಮತ್ತೆ ನನ್ನ ಜೀವನದಲ್ಲಿ ಪ್ರಣಯವನ್ನು ಮರಳಿ ತರಲು ನಿರ್ಧರಿಸಿದ್ದೇನೆ, ನನ್ನಿಂದಲೇ ಕೆಲವು ತಪ್ಪುಗಳಾಗಿರಬಹುದು. ನಾನು ಭರತ್‌ ಜೊತೆಗೆ ಡೇಟ್ ನೈಟ್‌ಗಳಿಗೆ ಅಥವಾ ಸಿನೆಮಾ ವೀಕ್ಷಣೆಗೆ ಹೋಗಿಲ್ಲ. ಇನ್ಮುಂದೆ ನನ್ನ ಬಗ್ಗೆ ಗಮನ ನೀಡುತ್ತೇನೆ. ಒಳ್ಳೆಯ ಉಡುಪುಗಳನ್ನು ಧರಿಸಿ ಭರತ್‌ ಜೊತೆಗೆ ವಾರಾಂತ್ಯದಲ್ಲಿ ಸಮಯ ಕಳೆಯುತ್ತೇನೆ ಎಂದೆಲ್ಲ ಇಶಾ ಬರೆದುಕೊಂಡಿದ್ದರು.

ಆದ್ರೆ ಇಶಾ ಡಿಯೋಲ್‌ ನಿರೀಕ್ಷೆ ಹುಸಿಯಾಗಿದೆ. ಭರತ್‌ ಬೇರೊಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಊಹಾಪೋಹಗಳು ಕೂಡ ಹರಿದಾಡುತ್ತಿವೆ. ಇವೆಲ್ಲದರ ನಡುವೆ ಇಶಾ ಹಾಗೂ ಭರತ್‌ ಪರಸ್ಪರ ದೂರವಾಗಿರುವುದು ಧೃಢಪಟ್ಟಿದೆ.

For Latest News Updates, Join Our Whatsapp Community🚩
RELATED ARTICLES

Most Popular