HomeEntertainmentಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಹಿಂದಿನ ಕಾರಣ ಬಿಚ್ಚಿಟ್ಟ ನಟಿ ಹೇಮಮಾಲಿನಿ...!

ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಹಿಂದಿನ ಕಾರಣ ಬಿಚ್ಚಿಟ್ಟ ನಟಿ ಹೇಮಮಾಲಿನಿ…!

ಬಾಲಿವುಡ್ ನಟ- ಪತಿ ಧರ್ಮೇಂದ್ರ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ನಟಿ ಹೇಮಮಾಲಿನಿ ಈ ಬಗ್ಗೆ ನಾನು ಯಾರನ್ನೂ ದೂರುವುದಿಲ್ಲ ಎಂದಿದ್ದಾರೆ.

ಆಗಲೇ ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದ ಧರ್ಮೇಂದ್ರ ಅವರನ್ನು 1980 ರಲ್ಲಿ ಮದುವೆಯಾಗಿ ಎರಡು ಹೆಣ್ಣು ಮಕ್ಕಳನ್ನು ಪಡೆದಿರುವ ಹೇಮಮಾಲಿನಿ, ಅಸಾಂಪ್ರದಾಯಿಕ ವೈವಾಹಿಕ ಜೀವನ ನಡೆಸಿದ್ದಾರೆ. ಜೀವನ ಬಂದಂತೆ ಸ್ವೀಕರಿಸಬೇಕು, ನಾನು ಯಾವುದರ ಬಗ್ಗೆಯೂ ದೂರುವುದಿಲ್ಲ ಎಂದು ಹೇಳಿದ್ದಾರೆ.

ಲೆಹ್ರೆನ್ ರೆಟ್ರೊಗೆ ನೀಡಿದ ಸಂದರ್ಶನದಲ್ಲಿ ಧರ್ಮೇಂದ್ರ ಅವರಿಂದ ದೂರವಾಗಿ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರೂ ಅವರು ಯಾವಾಗಲೂ ತಮ್ಮ ಹೆಣ್ಣುಮಕ್ಕಳ ಬಗ್ಗೆ ಯೋಚಿಸುತ್ತಾರೆ. ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುವಂತೆ ನನ್ನೊಂದಿಗೆ ಮಾತನಾಡುತ್ತಾರೆ. ಆಗ ನಾನು ಮದುವೆಯ ಕಾಲಕ್ಕೆ ಅದು ಆಗುತ್ತದೆ ಎಂದು ಧರ್ಮೇಂದ್ರ ಅವರಿಗೆ ಹೇಳಿದ್ದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿಯೊಬ್ಬ ಮಹಿಳೆ ಸಾಮಾನ್ಯ ಕುಟುಂಬ, ಗಂಡ ಮತ್ತು ಮಕ್ಕಳನ್ನು ಹೊಂದಲು ಬಯಸುತ್ತಾರೆ. ಆದರೆ ಎಲ್ಲೋ ಅದು ದಾರಿ ತಪ್ಪಿತು. ನಾನು ಅದರ ಬಗ್ಗೆ ಕೆಟ್ಟ ಭಾವನೆ ಹೊಂದಿಲ್ಲ. ನಾನು ನನ್ನೊಂದಿಗೆ ಸಂತೋಷವಾಗಿದ್ದೇನೆ. ನನಗೆ ಇಬ್ಬರು ಮಕ್ಕಳಿದ್ದು ಅವರನ್ನು ಚೆನ್ನಾಗಿ ಬೆಳೆಸಿದ್ದೇನೆ ಎಂದಿದ್ದಾರೆ.

ತಮ್ಮ ಮಕ್ಕಳಿಗಾಗಿ ಧರ್ಮೇಂದ್ರ ಯಾವಾಗಲೂ ಇರುತ್ತಾರೆ. ಅವರು ನಮ್ಮ ಹೆಣ್ಣುಮಕ್ಕಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಅದಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆಂದು ಹೇಮಮಾಲಿನಿ ಹೇಳಿದ್ದಾರೆ.

ಇತ್ತೀಚಿಗೆ ಜರುಗಿನ ಧರ್ಮೇಂದ್ರ ಅವರ ಮೊಮ್ಮಗ ಕರಣ್ ಡಿಯೋಲ್ ಮದುವೆ ಸಮಾರಂಭದಲ್ಲಿ ನಟಿ ಹೇಮಾ ಮಾಲಿನಿ ಅವರ ಹೆಣ್ಣುಮಕ್ಕಳಾದ ಇಶಾ ಮತ್ತು ಅಹಾನಾ ಕಾಣಿಸಿಕೊಂಡಿರಲಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular