ಡಿಜಿಟಲ್ ಡೆಸ್ಕ್ : ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಐತಿಹಾಸಿಕ ಯಾತ್ರೆ ಕೈಗೊಂಡ ಇಪ್ಪತ್ತನಾಲ್ಕು ಗಂಟೆಗಳ ನಂತರ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಗುರುವಾರ ಬಾಹ್ಯಾಕಾಶದಿಂದ ಮತ್ತೊಂದು ಸಂದೇಶ ಕಳುಹಿಸಿದ್ದಾರೆ.
ಇತರ ಗಗನಯಾತ್ರಿಗಳೊಂದಿಗೆ ಇಲ್ಲಿರಲು “ರೋಮಾಂಚನಗೊಂಡಿದ್ದೇನೆ, ಸಖತ್ ಥ್ರಿಲ್ ಆಗಿದ್ದೇನೆ ಎಂದು ಹೇಳಿದರು. ಹಾಗೂ ಇದೊಂದು ಅದ್ಭುತ ಸವಾರಿ ಎಂದು ಅವರು ಹೇಳಿದ್ದಾರೆ.
“ನಾನು ಇನ್ನೂ ಶೂನ್ಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತಿದ್ದೇನೆ – ಮಗುವಿನಂತೆ ನಡೆಯುವುದು, ಚಲಿಸುವುದು ಮತ್ತು ನನ್ನನ್ನು ನಿಯಂತ್ರಿಸುವುದು ಹೇಗೆ ಎಂದು ಕಲಿಯುವುದು. ಆದರೆ ನಾನು ಪ್ರತಿ ಕ್ಷಣವನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ” ಎಂದು ಅವರು ಹೇಳಿದರು.
ಆದರೆ ನಾನು ಪ್ರತಿ ಕ್ಷಣವನ್ನೂ ನಿಜವಾಗಿಯೂ ಆನಂದಿಸುತ್ತಿದ್ದೇನೆ” ಎಂದು ಅವರು ಹೇಳಿದರು, ಹಾಗೂ ತುಂಬಾ ನಿದ್ದೆ ಮಾಡುತ್ತಿದ್ದೇನೆ” ಎಂದು ಹೇಳುತ್ತಾ ನಕ್ಕರು. ಶುಕ್ಲಾ ಅವರು ಈ ಮಿಷನ್ “ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಮುಂಬರುವ ಗಗನಯಾನ ಮಿಷನ್ಗೆ ಒಂದು ಬಲವಾದ ಹೆಜ್ಜೆಯಾಗಿದೆ” ಎಂದು ಹೇಳಿದರು.

