
ಭಾನುವಾರ ಬೆಳಿಗ್ಗೆ, ಮಾಜಿ ಕ್ರಿಕೆಟಿಗನ ಪತ್ನಿ ಫೇಸ್ಬುಕ್ ಪೋಸ್ಟ್ ನಲ್ಲಿ ಅವರ ನಿಧನವನ್ನು ದೃಢಪಡಿಸಿದರು.
ಮೇ ತಿಂಗಳ ಆರಂಭದಲ್ಲಿ, ಸ್ಟ್ರೀಕ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಮತ್ತು ದಕ್ಷಿಣ ಆಫ್ರಿಕಾದ ಪ್ರಸಿದ್ಧ ಆಂಕೊಲಾಜಿಸ್ಟ್ ಒಬ್ಬರ ಅಡಿಯಲ್ಲಿ “ಚಿಕಿತ್ಸೆ ಪಡೆಯುತ್ತಿದ್ದರು. ಸ್ಟ್ರೀಕ್ ಅವರ ಸಾವಿಗೆ ಒಲೊಂಗಾ ಭಾನುವಾರ ಪ್ರತಿಕ್ರಿಯಿಸಿದ್ದಾರೆ. ಎಕ್ಸ್ ನಲ್ಲಿ, “ಆರ್ಐಪಿ ಸ್ಟ್ರೀಕಿ” ಎಂದು ಬರೆದಿದ್ದಾರೆ.
RIP Streaky
— Henry Olonga (@henryolonga) September 3, 2023
ಜಿಂಬಾಬ್ವೆ ಪರ 65 ಟೆಸ್ಟ್ ಮತ್ತು 189 ಏಕದಿನ ಪಂದ್ಯಗಳನ್ನಾಡಿರುವ ಸ್ಟ್ರೀಕ್ ಕ್ರಮವಾಗಿ 1990 ಮತ್ತು 2943 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 216 ವಿಕೆಟ್ ಮತ್ತು ಏಕದಿನದಲ್ಲಿ 239 ವಿಕೆಟ್ಗಳನ್ನು ಪಡೆದಿದ್ದಾರೆ ಮತ್ತು ಎರಡೂ ಸ್ವರೂಪಗಳಲ್ಲಿ ಜಿಂಬಾಬ್ವೆಯ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

