HomeKarnatakaಹೃದಯಾಘಾತ: ಕಾರಿನಲ್ಲಿಯೇ ಸಾವನ್ನಪ್ಪಿದ ಆರ್.ಎಸ್.ಎಸ್ ಮುಖಂಡ

ಹೃದಯಾಘಾತ: ಕಾರಿನಲ್ಲಿಯೇ ಸಾವನ್ನಪ್ಪಿದ ಆರ್.ಎಸ್.ಎಸ್ ಮುಖಂಡ

ಬಾಗಲಕೋಟೆ: ಹಠಾತ್ ಹೃದಯಾಘಾತದಿಂದ ಕಾರಿನಲ್ಲಿಯೇ ಆರ್.ಎಸ್.ಎಸ್ ಮುಖಂಡರೊಬ್ಬರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದಲ್ಲಿ ನಡೆದಿದೆ.

45 ವರ್ಷದ ಸಿದ್ದು ಚಿಕ್ಕದಾನಿ ಮೃತ ಆರ್.ಎಸ್.ಎಸ್ ಮುಖಂಡರು. ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಪೆಟ್ರೋಲ್ ಬಂಕ್ ನಿಂದ ಹೊರಡುತ್ತಿದ್ದ ವೇಳೆ ಸಿದ್ದು ಚಿಕ್ಕದಾನಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಪೆಟ್ರೋಲ್ ಬಂಕ್ ಬಳಿಯೇ ಕಾರು ನಿಲ್ಲಿಸುವಷ್ಟರಲ್ಲಿ ಹೃದಯಾಘಾತದಿಂದ ಕುಳಿತಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಡ ರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪೆಟ್ರೋಲ್ ಬಂಕ್ ಬಳಿಯೇ ಕಾರು ನಿಂತಿರುವುದನ್ನು ಕಂಡು ಇಂದು ಬೆಳಿಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ಪರಿಶೀಲಿಸಿ ಕಾರಿನ ಬಾಗಿಲು ತೆರೆದಿದ್ದಾರೆ. ಈ ವೇಳೆ ಸಿದ್ದು ಚಿಕ್ಕದಾನಿ ಸಾವನ್ನಪ್ಪಿರುವುದು ಗೊತ್ತಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular