HomeKarnatakaಒಂದೇ ದಿನ ಹೃದಯಾಘಾತದಿಂದ ಸಾವನ್ನಪ್ಪಿದ ದಂಪತಿ: ಸಾವಿನಲ್ಲೂ ಒಂದಾದ ಪತಿ-ಪತ್ನಿ

ಒಂದೇ ದಿನ ಹೃದಯಾಘಾತದಿಂದ ಸಾವನ್ನಪ್ಪಿದ ದಂಪತಿ: ಸಾವಿನಲ್ಲೂ ಒಂದಾದ ಪತಿ-ಪತ್ನಿ

ಚಿತ್ರದುರ್ಗ: ಜೀವನದಲ್ಲಿ ಜೊತೆಯಾಗಿದ್ದ ಪತಿ-ಪತ್ನಿ ಹೃದಯಾಘಾತಕ್ಕೊಳಗಾಗಿ ಸಾವಿನಲ್ಲೂ ಒಂದಾಗಿರುವ ವಿಚಿತ್ರ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.

ಓಂಕಾರಮೂರ್ತಿ ಹಾಗೂ ಪತ್ನಿ ದಾಕ್ಷಾಯಿಣಿ ಮೃತ ದಂಪತಿ. ಎಸ್.ಜೆ.ಎಂ ವಿದ್ಯಾಪೀಠದಲ್ಲಿ ಮುಖ್ಯ ಗ್ರ‍ಂಥಪಾಲಕರಾಗಿ ನಿವೃತ್ತಿ ಹೊಂದಿದ್ದ ಓಂಕಾರಮೂರ್ತಿ ಇಂದು ಬೆಳಿಗ್ಗೆ ಹೃದಯಾಘಾತಕ್ಕೊಳಗಾಗಿದ್ದರು. ತಕ್ಷಣ ಅವರನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪತಿಗೆ ಹಾರ್ಟ್ ಅಟ್ಯಾಕ್ ಎಂಬ ಸುದ್ದಿ ಕೇಳಿ ಪತ್ನಿ ದಾಕ್ಷಾಯಿಣಿ ಮನೆಯಲ್ಲಿಯೇ ಕುಸಿದುಬಿದ್ದಿದ್ದಾರೆ. ಹೃದಾಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓಂಕಾರಮೂರ್ತಿ ಕೂಡ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಪತಿ-ಪತ್ನಿ ಇಬ್ಬರೂ ಸಾವಿನಲ್ಲೂ ಜೊತೆಯಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular