HomeRecipiesರಾಗಿಯಲ್ಲ, ಗೋಧಿಯಲ್ಲ ಈ ಮುದ್ದೆ ತಿಂದ್ರೆ ಮಹಿಳೆಯರಾಗ್ತಾರೆ ಸ್ಟ್ರಾಂಗ್ ಬೊಜ್ಜು ಕರಗಿಸಲು ಇಲ್ಲಿದೆ ಮ್ಯಾಜಿಕ್ ರೆಸಿಪಿ

ರಾಗಿಯಲ್ಲ, ಗೋಧಿಯಲ್ಲ ಈ ಮುದ್ದೆ ತಿಂದ್ರೆ ಮಹಿಳೆಯರಾಗ್ತಾರೆ ಸ್ಟ್ರಾಂಗ್ ಬೊಜ್ಜು ಕರಗಿಸಲು ಇಲ್ಲಿದೆ ಮ್ಯಾಜಿಕ್ ರೆಸಿಪಿ

ಬೆಂಗಳೂರು: ಆರೋಗ್ಯಕರ ಆಹಾರ ಸೇವಿಸಬೇಕು, ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಬೇಕು (Weight Loss) ಎಂದು ಬಯಸುವವರಿಗೆ ಈಗ ಅಗಸೆ ಬೀಜಗಳ ಮುದ್ದೆ (Flax Seeds Mudde) ಹೊಸ ಭರವಸೆಯಾಗಿ ಮೂಡಿಬಂದಿದೆ. ಅನೇಕರು ಅಪೌಷ್ಟಿಕತೆ ಮತ್ತು ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಅಗಸೆ ಬೀಜ ಒಂದು ಅದ್ಭುತ ವರದಾನ ಎಂದು ಆಯುರ್ವೇದ ತಜ್ಞರು ಹೇಳುತ್ತಿದ್ದಾರೆ.

ಹೃದಯಕ್ಕೆ ಫ್ರೆಂಡ್, ಬೊಜ್ಜಿಗೆ ಎನಿಮಿ
ಅಗಸೆ ಬೀಜಗಳಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಕೇವಲ ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ, ದೇಹದ ಚಯಾಪಚಯ ಕ್ರಿಯೆಯನ್ನು (Metabolism) ವೇಗಗೊಳಿಸಿ ಬೊಜ್ಜನ್ನು ಬೆಣ್ಣೆಯಂತೆ ಕರಗಿಸಲು ಸಹಾಯ ಮಾಡುತ್ತದೆ. ಮಹಿಳೆಯರಲ್ಲಿ ಕಾಡುವ ಮುಟ್ಟಿನ ಸಮಸ್ಯೆ, PCOD ಮತ್ತು ಋತುಬಂಧದ (Menopause) ತೊಂದರೆಗಳನ್ನು ನಿಯಂತ್ರಿಸುವಲ್ಲಿ ಇದರಲ್ಲಿರುವ ‘ಲಿಗ್ನನ್’ಗಳು ಪ್ರಮುಖ ಪಾತ್ರ ವಹಿಸುತ್ತವೆ.

ಅಗಸೆ ಬೀಜದ ಮುದ್ದೆ ತಯಾರಿಸುವುದು ಹೇಗೆ?
ಈ ಪೌಷ್ಟಿಕಾಂಶಯುಕ್ತ ಮುದ್ದೆ ತಯಾರಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೇಕಾಗುವ ಪದಾರ್ಥಗಳು:


ಅಗಸೆ ಬೀಜ (1 ಕಪ್), ಎಳ್ಳು (1/2 ಕಪ್), ಕೊತ್ತಂಬರಿ ಸೊಪ್ಪು, ಕರಿಬೇವು, ಒಣ ಮೆಣಸಿನಕಾಯಿ (20-25), ಕಡಲೆ ಬೇಳೆ, ಜೀರಿಗೆ, ಸಬ್ಬಸಿಗೆ, ಹುಣಸೆಹಣ್ಣು, ಬೆಳ್ಳುಳ್ಳಿ, ಲವಂಗ ಮತ್ತು ಇಂಗು.

ತಯಾರಿಸುವ ವಿಧಾನ:

ಬಾಣಲೆಯಲ್ಲಿ ಅಗಸೆ ಬೀಜಗಳನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಎಳ್ಳು, ಕರಿಬೇವು, ಮೆಣಸಿನಕಾಯಿಯನ್ನು ಪ್ರತ್ಯೇಕವಾಗಿ ಹುರಿದು ಪಕ್ಕಕ್ಕೆ ಇರಿಸಿ.

ಜೀರಿಗೆ, ಬೇಳೆ ಹಾಗೂ ಹುಣಸೆಹಣ್ಣನ್ನು ಕೂಡ ಹುರಿದುಕೊಳ್ಳಿ.

ಈ ಎಲ್ಲಾ ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಉಪ್ಪು, ಇಂಗು ಮತ್ತು ಬೆಳ್ಳುಳ್ಳಿ ಸೇರಿಸಿ ಪುಡಿ ಮಾಡಿ (ಚಟ್ನಿ ಪುಡಿಯಂತೆ).

ಈಗ ಒಲೆಯ ಮೇಲೆ ಪಾತ್ರೆ ಇಟ್ಟು ನೀರು ಕುದಿಸಿ. ನೀರು ಕುದಿಯುವಾಗ ಸಿದ್ಧಪಡಿಸಿದ ಅಗಸೆ ಪುಡಿಯನ್ನು ಸೇರಿಸಿ, ಮುದ್ದೆ ಕೋಲಿನಿಂದ ತಿರುವಿ ಗಟ್ಟಿಯಾಗುತ್ತಿದ್ದಂತೆಯೇ ಮುದ್ದೆ ಕಟ್ಟಿ.

ದಿನಾ ತಿಂದ್ರೆ ಏನೆಲ್ಲಾ ಲಾಭ?


ಮೂಳೆಗಳ ಬಲ: ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ ಮಹಿಳೆಯರ ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತದೆ.

ಹೊಳೆಯುವ ಚರ್ಮ: ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ಸುಕ್ಕು ತಡೆದು ಯೌವನ ಕಾಪಾಡುತ್ತವೆ.

ಹಸಿವಿನ ನಿಯಂತ್ರಣ: ಇದರಲ್ಲಿ ಫೈಬರ್ ಹೆಚ್ಚಿರುವುದರಿಂದ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಇದರಿಂದ ಅತಿಯಾಗಿ ತಿನ್ನುವುದು ತಪ್ಪುತ್ತದೆ.

ಕೂದಲು: ಕೂದಲು ಉದುರುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular