BIG NEWS: ಮಿನಿ ‘ನರ್ಸಿಂಗ್ ಹೋಂ’ ನಡೆಸುತ್ತಿದ್ದ ನಕಲಿ ವೈದ್ಯನನ್ನು ಕಂಡು ಬೆಚ್ಚಿಬಿದ್ದ ಆರೋಗ್ಯಾಧಿಕಾರಿಗಳು…!

 

ಕೋಲಾರ ಜಿಲ್ಲೆಯಲ್ಲಿನ ನಕಲಿ ಕ್ಲಿನಿಕ್ ಗಳ ವಿರುದ್ಧ ಮುಗಿಬಿದ್ದಿರುವ ಆರೋಗ್ಯ ಇಲಾಖೆಯು ಗುರುವಾರ ಮಾಲೂರು, ಶ್ರೀನಿವಾಸಪುರ ಮತ್ತು ಬಂಗಾರಪೇಟೆ ತಾಲ್ಲೂಕುಗಳಲ್ಲಿ ಇದ್ದ ಐದು ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿದ್ದಾರೆ. ನಕಲಿ ಆರ್.ಎಂ.ಪಿ. ಡಾಕ್ಟರುಗಳು ಇದನ್ನು ನಡೆಸುತ್ತಿದ್ದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಲೂರು ತಾಲ್ಲೂಕಿನ ಆರೋಗ್ಯ ಅಧಿಕಾರಿ ಡಾ. ಮಂಜುಳಾ, ತಹಶೀಲ್ದಾರ್ ರಮೇಶ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ನೋಡೆಲ್ ಅಧಿಕಾರಿ ಡಾ. ಚಂದನ್ ಕುಮಾರ್ ನೇತೃತ್ವದ ತಂಡ ಟೇಕಲ್ನಲ್ಲಿ ಎರಡು ನಕಲಿ ಕ್ಲಿನಿಕ್ ಗಳನ್ನು ಬಂದ್ ಮಾಡಿ ನಕಲಿ ವೈದ್ಯರಿಗೆ ನೋಟೀಸ್ ನೀಡಿದೆ.

ಟೇಕಲ್ ಪದ್ಮನಾಭಯ್ಯ ಕಾಂಪ್ಲೆಕ್ಸ್ ಹಿಂಭಾಗದಲ್ಲಿದ್ದ ಮೋದಕ ಕ್ಲಿನಿಕ್ ನಡೆಸುತ್ತಿದ್ದ ಪ್ರಕಾಶ್ ವಿಚಾರಣೆ ಮಾಡಿದಾಗ ಸಮರ್ಪಕ ದಾಖಲೆಗಳು ಇರಲಿಲ್ಲ. ಕ್ಲಿನಿಕ್ ಹಾಗೂ ಪಕ್ಕದಲ್ಲಿದ್ದ ಮೆಡಿಕಲ್ ಸ್ಟೋರ್ ಗೆ ಬೀಗ ಹಾಕಲಾಯಿತು.

ಟೇಕಲ್ ಸರ್ಕಲ್ ಬಳಿಯ ಶ್ರೀನಿವಾಸ ಎಂಬಾತ ಮಿನಿ ನರ್ಸಿಂಗ್ ಹೋಂ ತೆರೆದು ರೋಗಿಗಳನ್ನು ದಾಖಲಿಸಿಕೊಂಡಿದ್ದರು. ಇದನ್ನು ಕಂಡ ಆರೋಗ್ಯ ಅಧಿಕಾರಿಗಳು ದಿಗ್ಬ್ರಮೆಗೊಂಡರು. ಆತ ವೈದ್ಯ ಎಂಬುದಕ್ಕೆ ಯಾವ ದಾಖಲೆಯೂ ಇರಲಿಲ್ಲ, ಇದ್ದಿದ್ದು ಸಹ ನಕಲಿಯಾಗಿದ್ದವು. ಕ್ಲಿನಿಕ್ ನ್ನು ಬಂದ್ ಮಾಡಿಸಿ ನೋಟೀಸ್ ನೀಡಲಾಯಿತು.

ದಾಳಿಯಲ್ಲಿ ನಾಡಕಛೇರಿ ಆರ್.ಐ‌. ನಾರಾಯಣಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಆನಂದ್, ಪೊಲೀಸ್ ಠಾಣೆ ಎಎಸ್ಐ ಗೋಪಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read