‘ಒಣ ದ್ರಾಕ್ಷಿ’ ಆರೋಗ್ಯ ಪ್ರಯೋಜನ ನೂರು

ಒಣ ದ್ರಾಕ್ಷಿ ಬಹುತೇಕರಿಗೆ ಇಷ್ಟವೇ. ಅದರೆ ಇದನ್ನು ನಿತ್ಯ ಸೇವಿಸುವುದರಿಂದ ಎಷ್ಟೆಲ್ಲಾ ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ?

ಒಣದ್ರಾಕ್ಷಿಯ ಮಹತ್ವದ ಬಗ್ಗೆ ಅರಿತವರು ಕಡಿಮೆ. ಒಣಹಣ್ಣುಗಳ ಪೈಕಿ ತುಸು ಕಡಿಮೆ ದರಕ್ಕೆ ಲಭ್ಯವಾಗುವ ಇವುಗಳಿಂದ ಹಲವಾರು ಪ್ರಯೋಜನಗಳಿವೆ. ಕಪ್ಪುದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನ್ಯೂಟ್ರಿಷನ್ ಪ್ರಮಾಣ ಹೇರಳವಾಗಿ ಲಭ್ಯವಾಗುತ್ತದೆ.

ಮುಖದಲ್ಲಿ ಮೊಡವೆ, ಅದರ ಕಲೆ ಇರುವವರು ನಿತ್ಯ ಒಣದ್ರಾಕ್ಷಿ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ. ತಿಂಗಳೊಳಗೆ ನಿಮ್ಮ ತ್ವಚೆ ಎಷ್ಟು ಸ್ವಚ್ಛವಾಗುತ್ತದೆಯೋ ನೋಡಿ. ನಿತ್ಯ ಹತ್ತು ದ್ರಾಕ್ಷಿ ಸೇವಿಸುವುದರಿಂದ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಅಷ್ಟೇ ಅಲ್ಲ ರಕ್ತ ಹೀನತೆ ಸಮಸ್ಯೆಯೂ ದೂರವಾಗುತ್ತದೆ.

ಕಪ್ಪು ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ದೇಹದಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳೆಯುವ ಲಕ್ಷಣಗಳೂ ದೂರವಾಗುತ್ತವೆ. ಮುಖದ ಮೇಲಿನ ಸುಕ್ಕನ್ನು ಕಡಿಮೆ ಮಾಡಿ ನಿಮ್ಮ ವಯಸ್ಸನ್ನು ಮತ್ತಷ್ಟು ಇಳಿಸುವ ದ್ರಾಕ್ಷಿಯನ್ನು ನಿತ್ಯ ಸೇವಿಸಿ, ಆರೋಗ್ಯ ರಕ್ಷಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read