HomeEntertainment'ಮನಮೆ' ಚಿತ್ರದ ನಾಲ್ಕನೇ ಹಾಡು ರಿಲೀಸ್

‘ಮನಮೆ’ ಚಿತ್ರದ ನಾಲ್ಕನೇ ಹಾಡು ರಿಲೀಸ್

ಶರ್ವಾನಂದ್ ಅಭಿನಯದ ಬಹುನಿರೀಕ್ಷಿತ ‘ಮನಮೆ’  ಇಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ನಾಲ್ಕನೇ ಹಾಡು ಸೋನಿ ಮ್ಯೂಸಿಕ್ ಸೌತ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಬೂಮ್ ಬೂಮ್’ ಎಂಬ ಈ ಹಾಡಿಗೆ ಹೇಮಚಂದ್ರ ಮತ್ತು ಸೀರತ್ ಕಪೂರ್ ಧ್ವನಿಯಾಗಿದ್ದು, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ನೀಡಿದ್ದಾರೆ. ಭಾಸ್ಕರ ಅವರ ಸಾಹಿತ್ಯವಿದೆ.

ಶ್ರೀರಾಮ್ ಆದಿತ್ಯ ನಿರ್ದೇಶನದ ಈ ಚಿತ್ರದಲ್ಲಿ ಶರ್ವಾನಂದ್ ಮತ್ತು ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದು, ವಿಕ್ರಮ್ ಆದಿತ್ಯ, ಸೀರತ್ ಕಪೂರ್, ಆಯೇಶಾ ಖಾನ್, ವೆನ್ನೆಲ ಕಿಶೋರ್, ರಾಹುಲ್ ರವೀಂದ್ರನ್, ರಾಹುಲ್ ಕೃಷ್ಣ, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ನಲ್ಲಿ ಟಿಜಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿದ್ದು, ಪ್ರವೀಣ್ ಪುಡಿ ಸಂಕಲನ, ಜ್ಞಾನ ಶೇಖರ್ ವಿ.ಎಸ್ ಛಾಯಾಗ್ರಹಣ, ಅರ್ಜುನ್, ವೆಂಕಟೇಶ್ ಸಂಭಾಷಣೆ, ಹಾಗೂ ಸತೀಶ್ ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular