ಯಾವ ರೀತಿ ದುಡ್ಡು ಹೊಡಿತಿದ್ದಾರೆಂದು ದಾಖಲೆ ಸಮೇತ ಎಳೆಎಳೆಯಾಗಿ ಚರಿತ್ರೆ ಬಿಚ್ಚಿಡುತ್ತೇನೆ: ಶಾಸಕ ಶಿವಲಿಂಗೇಗೌಡರ ವಿರುದ್ಧ ಗುಡುಗಿದ ಹೆಚ್.ಡಿ. ರೇವಣ್ಣ

ಹಾಸನ: ಅರಸೀಕೆರೆ ಶಾಸಕ ಶಿವಲಿಂಗೇಗೌಡರ ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಗುಡುಗಿದ ಅವರು, ಶಿವಲಿಂಗೇಗೌಡ ರಾಗಿ ಕಳ್ಳ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲಕ್ಕೆ ಹೋಗಿ ಸತ್ಯ ಮಾಡಿದರು. ಶಿವಲಿಂಗೇಗೌಡರಿಗೆ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಲು ತಾಕತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.

ಅರಸೀಕೆರೆ ಕ್ಷೇತ್ರದಲ್ಲಿ ರಸ್ತೆಗಳಿಗೆ ಕುಮಾರಸ್ವಾಮಿ ಸಾಕಷ್ಟು ಹಣ ಕೊಟ್ಟಿದ್ದಾರೆ. ರಸ್ತೆಗಳ ನಿರ್ಮಾಣ ಕಾಮಗಾರಿ ಗುತ್ತಿಗೆದಾರರು ಯಾರೆಂದು ಹೇಳಲಿ. ಯಾರು ಗುತ್ತಿಗೆ ಮಾಡಿದ್ದು ಎಂದು ಆಣೆ ಮಾಡಲು ಅವರಿಗೆ ತಾಕತ್ ಇದೆಯಾ ಎಂದು ಕೇಳಿದ್ದಾರೆ.

ಪತ್ನಿ ಹೆಸರಲ್ಲಿ ಏನೇನು ಕೆಲಸ ಮಾಡುತ್ತಿದ್ದಾರೆ? ಯಾರ ಹೆಸರಲ್ಲಿ ಗುತ್ತಿಗೆ ಮಾಡಿಸಿದ್ದಾರೆ? ಯಾವ ರೀತಿ ದುಡ್ಡು ಹೊಡೆದಿದ್ದಾರೆ? ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಎಲ್ಲವನ್ನು ಬಹಿರಂಗ ಮಾಡುತ್ತೇನೆ. ಶಿವಲಿಂಗೇಗೌಡನ ಚರಿತ್ರೆ ಎಳೆಎಳೆಯಾಗಿ ಬಿಚ್ಚಿಡುತ್ತೇನೆ. ಇವನಿಗೆ ಮಾನ ಮರ್ಯಾದೆ ಇದೆಯಾ? ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲೋ ಇದ್ದ ಶಿವಲಿಂಗೇಗೌಡನನ್ನು ದೇವೇಗೌಡರು ಕರೆತಂದಿದ್ದರು. ರಾಜಕೀಯವಾಗಿ ಶಕ್ತಿ ಕೊಟ್ಟಂತಹ ದೇವೇಗೌಡರ ಬಗ್ಗೆ ಮಾತನಾಡುತ್ತಾರೆ. ಪಕ್ಷದ್ರೋಹಿಗಳಿಗೆ ಬುದ್ಧಿ ಕಲಿಸುವ ಕಾಲ ಬಂದಿದೆ. ಬುದ್ಧಿ ಕಲಿಸಬೇಕು. ಕುರುಬ ಸಮಾಜದ ವ್ಯಕ್ತಿಯನ್ನು ನಿಲ್ಲಿಸಿ ಶಿವಲಿಂಗೇಗೌಡ ಗೆಲ್ಲಿಸಲಿ. ಮಾನ ಮರ್ಯಾದೆ ಇದ್ರೆ ಕುರುಬ ಸಮಾಜದ ವ್ಯಕ್ತಿಯನ್ನು ಗೆಲ್ಲಿಸಲಿ ಎಂದು ಹೆಚ್.ಡಿ. ರೇವಣ್ಣ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read