HomeKarnatakaBIG NEWS: ಪೆನ್ ಡ್ರೈವ್ ನಲ್ಲಿರೋದೇ ಬೇರೆ ಸಬ್ಜೆಕ್ಟ್ : ಕಾಂಗ್ರೆಸ್ ನವರಿಗೆ ಆತುರವೇಕೆ ?...

BIG NEWS: ಪೆನ್ ಡ್ರೈವ್ ನಲ್ಲಿರೋದೇ ಬೇರೆ ಸಬ್ಜೆಕ್ಟ್ : ಕಾಂಗ್ರೆಸ್ ನವರಿಗೆ ಆತುರವೇಕೆ ? ಎಂದ HDK

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿ ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿ ಹೇಳಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈಗ ಪೆನ್ ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ ನವರಿಗೆ ಆತುರ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಪೆನ್ ಡ್ರೈವ್ ನಲ್ಲಿರೋದೇ ಬೇರೆ ಸಬ್ಜಕ್ಟ್. ಈಗ ನಾನು ಹೇಳುತ್ತಿರುವ ದರ ಪಟ್ಟಿಯೇ ಬೇರೆ. ಪೆನ್ ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ ನವರಿಗೆ ಯಾಕಿಷ್ಟು ಆತುರ? ಪೆನ್ ಡ್ರೈವ್ ಖಾಲಿಯೇನೂ ಇಲ್ಲ, ಈ ಪೆನ್ ಡ್ರೈವ್ ಆಪರೇಷನ್ ಮಾಡಿದ ಸಿಡಿ ರೀತಿ ಅಲ್ಲ. ಪೆನ್ ಡ್ರೈವ್ ಬಿಡುಗಡೆಗೆ ಇನ್ನೂ ಬೇಕಾದಷ್ಟು ಸಮಯವಿದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

ನನಗೆ ಯಾರ ಮೇಲೂ ಧ್ವೇಷ, ಅಸಮಾಧಾನವಿಲ್ಲ, ನಾನು ಕೆಲ ಸಲಹೆ ನೀಡಿದ್ದೇನೆ. ಸರಿ ಪಡಿಸಿಕೊಳ್ಳುವುದಾದರೆ ಸರಿಪಡಿಸಿಕೊಳ್ಳಲಿ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular