HomeKarnatakaBREAKING NEWS: ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿ, ಕೊಲೆ ಯತ್ನ: ಅಪರಾಧಿಗೆ 10 ವರ್ಷ...

BREAKING NEWS: ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿ, ಕೊಲೆ ಯತ್ನ: ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಪ್ರಕಟ

ಹಾವೇರಿ: ಮಹಿಳೆಯ ಮೇಲೆ ಆಸಿಡ್ ಎರಚಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಹಾವೇರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಅಪರಾಧಿ ಪ್ರಸಾದ್ ಅಲಿಯಾಸ್ ಪ್ರಶಾಂತ್ ಚಿಕ್ಕಳ್ಳಿ. ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಜಿಲ್ಲಾ ನ್ಯಾಯಾಲಯ ಅಪರಾಧಿ ಪ್ರಸಾದ್ ಗೆ 10 ವರ್ಷಗಳ ಕಾಲ ಕಠಿಣ ಕಾರಾಗೃಹ ಹಾಗೂ 1 ಲಕ್ಷದ 70 ಸಾವಿರ ರೂಪಾಯಿ ದಂಡ ವಿಧಿಸಿದೆ.

ಇದೇ ವೇಳೆ ನೊಂದ ಮಹಿಳೆಗೆ 3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಸರ್ಕಾರ ಪರಿಹಾರ ನಿಧಿಯಿಂದ ನೊಂದ ಮಹಿಳೆಗೆ 3 ಲಕ್ಷ ರೂಪಾಯಿ ನೀಡಬೇಕು ಎಂದು ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2020ರಲ್ಲಿ ಮನೆಗೆ ತೆರಳುತ್ತಿದ್ದ ಮಹಿಳೆಯನ್ನು ಬೈಕ್ ನಲ್ಲಿ ಬಂದಿದ್ದ ಪ್ರದೀಪ್ ಎಂಬಾತ ಅಡ್ಡಗಟ್ಟಿ ಆಸಿಡ್ ದಾಳಿ ನಡೆಸಿದ್ದ. ನನ್ನನ್ನು ಮದುವೆಯಾಗದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದ. ಆಸಿಡ್ ದಾಳಿಯಿಂದ ಮಹಿಳೆಯ ಎದೆ, ಬಲಗಣ್ಣಿಗೆ ಗಾಯಗಳಾಗಿತ್ತು. ಹಾವೇರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular