HomeBeautyಟ್ರೈ ಮಾಡಿದ್ದೀರಾ ʼತುಳಸಿʼ ಫೇಸ್ ಪ್ಯಾಕ್..…?

ಟ್ರೈ ಮಾಡಿದ್ದೀರಾ ʼತುಳಸಿʼ ಫೇಸ್ ಪ್ಯಾಕ್..…?

ಮಾಲಿನ್ಯ , ಧೂಳು, ಕೊಳೆಗಳು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಈ ವೇಳೆ ಚರ್ಮಕ್ಕೆ ಹೆಚ್ಚಿನ ಆರೈಕೆ ಮುಖ್ಯ. ಇಲ್ಲವಾದರೆ ಚರ್ಮ ನಿರ್ಜೀವವಾಗುತ್ತದೆ. ಹಾಗಾಗಿ ವಾರಕ್ಕೊಮ್ಮೆಯಾದರೂ ತುಳಸಿ ಫೇಸ್ ಪ್ಯಾಕ್ ಬಳಸಿ.

2ಚಮಚ ತುಳಸಿ ಪೇಸ್ಟ್ ನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಬಾದಾಮಿ ಪೇಸ್ಟ್, 2 ಚಮಚ ಶ್ರೀಗಂಧದ ಪುಡಿ, 1 ಚಮಚ ಕಡಲೆಹಿಟ್ಟನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ 1 ಚಮಚ ಎಳ್ಳಣ್ಣೆ, ರೋಸ್ ವಾಟರ್, ಚಿಟಿಕೆ ಅರಶಿನ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅದನ್ನು ವೃತ್ತಾಕಾರದಲ್ಲಿ ಚಲನೆಯಲ್ಲಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ.

 ಇದನ್ನು 20 ನಿಮಿಷಗಳ ಕಾಲ ಬಿಟ್ಟು ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡುವುದರಿಂದ ಮುಖದಲ್ಲಿರುವ ಕಲ್ಮಶಗಳು ನಿವಾರಣೆಯಾಗಿ ಮುಖದ ಹೊಳಪು ಹೆಚ್ಚಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular