ಪೋಷಕಾಂಶಗಳ ಆಗರ ʼಪಿಯರ್ಸ್ʼ ತಿಂದಿದ್ದೀರಾ…?

ಪಿಯರ್ಸ್ ಹಣ್ಣನ್ನು ಕನ್ನಡದಲ್ಲಿ ಮರಸೇಬು ಎಂದೂ ಕರೆಯಲಾಗುತ್ತದೆ. ಇದರ ಸೇವನೆಯಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ?

ಇದು ಕೂಡಾ ಸೇಬಿನಂತೆ ಪೋಷಕಾಂಶಗಳ ಆಗರವಾಗಿದ್ದು ಅತ್ಯುತ್ತಮ ಪ್ರಮಾಣದ ನಾರಿನಾಂಶವಿದೆ. ಮಲಬದ್ಧತೆ ಸಮಸ್ಯೆ ಇರುವವರು ನಿತ್ಯ ಈ ಹಣ್ಣನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುವ ಇದರಲ್ಲಿ ಫೈಬರ್ ಅಂಶಗಳು ಹೇರಳವಾಗಿವೆ.

ಮಧುಮೇಹ ನಿಯಂತ್ರಣಕ್ಕೂ ಈ ಹಣ್ಣನ್ನು ಸೇವಿಸಬಹುದು. ಹೃದಯ ಸಂಬಂಧಿ ಕಾಯಿಲೆಗಳನ್ನು ಬರದಂತೆ ನೋಡಿಕೊಳ್ಳುವ ಪಿಯರ್ಸ್ ಕ್ಯಾನ್ಸರ್ ಗೂ ರಾಮಬಾಣ ಎಂದು ಗುರುತಿಸಿಕೊಂಡಿದೆ.

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇದನ್ನು ಮಕ್ಕಳಿಗೂ ನಿರಾತಂಕವಾಗಿ ಕೊಡಬಹುದು. ಇದಕ್ಕೆ ಚಿಟಿಕೆ ಉಪ್ಪು ಹಾಗೂ ಖಾರ ಹಾಕಿ ತಿಂದರೆ ರುಚಿ ಜಾಸ್ತಿ. ಈ ಹಣ್ಣಿನಲ್ಲಿರುವ ಗ್ಲುಕೋಸ್ ದೇಹಕ್ಕೆ ತಕ್ಷಣ ಶಕ್ತಿ ಒದಗಿಸಿ ಕೊಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read