ಹೊಸ ಕಾರು ಖರೀದಿಸಿದ್ದೀರಾ…..? ಈ ʼಐದುʼ ಅಂಶಗಳ ಬಗ್ಗೆ ಇರಲಿ ಗಮನ

ಕಾರು ಖರೀದಿ ಮಾಡುವುದು ಒಂದು ದೊಡ್ಡ ಹೂಡಿಕೆ ಎಂದು ವಿವರಿಸಿ ಹೇಳಬೇಕೆಂದಿಲ್ಲ. ಕಷ್ಟಪಟ್ಟು ಕೂಡಿಟ್ಟ ಕಾಸಿನಲ್ಲಿ ಕಾರು ಖರೀದಿ ಮಾಡಿದಾಗ ಮನೆಗೊಬ್ಬ ಹೊಸ ಸದಸ್ಯನೇ ಬಂದಂಥ ಫೀಲ್ ಆಗುವ ಮಂದಿ ತಮ್ಮ ಹೊಸ ಬಂಧುವನ್ನು ಬಹಳ ಜಾಗರೂಕತೆಯಿಂದ ನೋಡಿಕೊಂಡು ತಮ್ಮ ವಾಹನವು ವರ್ಷಗಳ ಕಾಲ ಚೆನ್ನಾಗಿ ಬಾಳಿಕೆ ಬರಲಿ ಎಂದು ಅಪೇಕ್ಷಿಸುವುದು ಸಹಜವೇ.

ಈ ನಿಟ್ಟಿನಲ್ಲಿ ಕಾರು ಖರೀದಿ ಮಾಡಿದ ಮೊದಲ ಕೆಲ ದಿನಗಳು ಬಹಳ ಮುಖ್ಯವಾಗಿವೆ. ಈ ಬಗ್ಗೆ ಕೆಲವೊಂದು ಮುಖ್ಯವಾದ ಟಿಪ್ಸ್‌ಗಳು ಇಂತಿವೆ.

1. ಉತ್ಪಾದಕರ ಶಿಫಾರಸುಗಳಿಗೆ ಬದ್ಧರಾಗಿ:

ನಿಮ್ಮ ಕಾರನ್ನು ಸುಗಮವಾಗಿ ಚಲಿಸಲು ಅದರ ಉತ್ಪಾದಕರು ನಿಮಗೆ ಒಂದಷ್ಟು ಸೂಚನೆ ಹಾಗೂ ಸಲಹೆಗಳನ್ನು ಕೊಡುತ್ತಾರೆ. ಮೊದಲ 1000-1500 ಕಿಮೀವರೆಗೂ ಇಂಜಿನ್‌‌ನ ಗಿರಕಿಗಳು 2000-2500 ಆರ್‌ಪಿಎಂ ದಾಟದಂತೆ ಸಾಗಲು ಬಹುತೇಕ ಎಲ್ಲ ಕಾರುಗಳ ಉತ್ಪಾದಕರೂ ತಮ್ಮ ಗ್ರಾಹಕರಿಗೆ ತಿಳಿಸುತ್ತಾರೆ.

ಇದು ಮೊದಲ ಒಂದು ತಿಂಗಳವರೆಗೂ ಹೀಗೇ ಇರಬೇಕಾಗುತ್ತದೆ. ನಂತರ ನೀವು ಸಾಮಾನ್ಯ ಚೆಕ್-ಅಪ್‌ಗೆ ಕಾರನ್ನು ಕೊಂಡೊಯ್ಯಬೇಕಾಗುತ್ತದೆ.

2. ವೇಗವನ್ನು 80 ಕಿಮೀ/ಗಂಟೆಗಿಂತ ಕಡಿಮೆ ಇಡಲು ನೋಡಿ:

ಇದು ಸಾಮಾನ್ಯವಾಗಿ ಮೊದಲ ಅಂಶದ ವಿಸ್ತರಿತ ಸಲಹೆಯಾಗಿದೆ. ಕಾರಿನ ವೇಗ ಹೆಚ್ಚಾದಷ್ಟೂ ಇಂಜಿನ್‌ನ ಗಿರಕಿ/ನಿಮಿಷ (ಆರ್‌ಪಿಎಂ) ಹೆಚ್ಚಾಗುತ್ತದೆ.

ಇದರೊಂದಿಗೆ ಹೊಸ ಇಂಜಿನ್ ಮೇಲೆ ನೀವು ಒತ್ತಡ ಹಾಕಿದಂತೆ ಆಗುತ್ತದೆ. ಹೀಗಾಗಿ 80ಕಿಮೀ/ಗಂಟೆಗಿಂತ ಕಡಿಮೆ ವೇಗದಲ್ಲಿ ಚಾಲನೆ ಮಾಡಲು ಪ್ರಯತ್ನಿಸಿ.

3. ದಿಢೀರ್‌ ಬ್ರೇಕ್ ಹಾಕುವುದನ್ನು ತಪ್ಪಿಸಿ:

ತೀರಾ ಅನಿವಾರ್ಯತೆ ಇದ್ದಾಗಲೂ ಬ್ರೇಕ್ ಹಾಕಬೇಡಿ ಎಂದು ಹೇಳುತ್ತಿಲ್ಲ. ಕಾರು ಮೊದಲ ಸರ್ವೀಸ್‌ಗೆ ಹೋಗುವವರೆಗೂ ಬ್ರೇಕ್ ‌ಅನ್ನು ವ್ಯವಧಾನವಾಗಿ ಬಳಸಿದಷ್ಟು ಉತ್ತಮ. ಹೀಗಾಗಿ ಸುದೀರ್ಘ ರಸ್ತೆ ಟ್ರಿಪ್‌ಗಳನ್ನು ಮೊದಲ ಸರ್ವೀಸ್‌ವರೆಗೂ ಸಾಧ್ಯವಾದಷ್ಟು ತಪ್ಪಿಸಿ.

4. ಇಂಜಿನ್ ಆಯಿಲ್ ಪರೀಕ್ಷಿಸಿ:

ನಿಮ್ಮ ಕಾರಿನ ಆರೋಗ್ಯದ ದೃಷ್ಟಿಯಿಂದ ಈ ಸಲಹೆ ಬಹಳ ಮುಖ್ಯವಾಗಿದೆ. ಹೊಸ ಕಾರಿನ ಇಂಜಿನ್ ಆಯಿಲ್ ‌ಅನ್ನು ಪ್ರತಿ ವಾರಕ್ಕೊಮ್ಮೆ ಪರೀಕ್ಷಿಸಬೇಕಾಗುತ್ತದೆ.

5. ಯಾವುದೇ ಕಾರಣಕ್ಕೂ ಮೊದಲ ಸರ್ವೀಸ್ ತಪ್ಪಿಸಬೇಡಿ:

ಜೀವನದಲ್ಲಿ ಅದೆಷ್ಟೇ ಬ್ಯುಸಿ ಆಗಿದ್ದರೂ ಸಹ, ಕಾರಿನ ಮೊದಲ ಸರ್ವೀಸ್‌ ಬಹಳ ಅಮೂಲ್ಯವಾದದ್ದು. ನಿಗದಿತ ಕಾಲಮಿತಿಯೊಳಗೆ ನಿಮ್ಮ ಕಾರಿನ ಮೊದಲ ಸರ್ವೀಸ್‌ ಮಾಡುವುದು ಸುದೀರ್ಘಕಾಲೀನ ದೃಷ್ಟಿಯಿಂದ ಅತ್ಯಗತ್ಯವಾದ ಒಂದು ಕ್ರಮ.

ಪ್ರಮಾಣೀಕೃತ ತಜ್ಞರಿಂದ ಚೆಕ್‌-ಅಪ್ ಆಗುವ ವೇಳೆ ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದರೂ ಸ್ಪಷ್ಟ ಪರಿಹಾರ ಕಂಡುಕೊಳ್ಳಲು ಇದರಿಂದ ಸಾಧ್ಯ.

ನಿಮ್ಮ ಕಾರಿನ ವಾರಂಟಿ ಹಾಳಾಗದಂತೆ ನೋಡಿಕೊಳ್ಳಲು ನಿಗದಿತ ಕಾಲಮಿತಿಯೊಳಗೆ ಸರ್ವೀಸ್‌ ಮಾಡಿಸುತ್ತಿರಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read