HomeCrimeಪತಿಯಿಂದಲೇ ಘೋರ ಕೃತ್ಯ: ಮೂರು ತಿಂಗಳ ನಂತರ ಬಯಲಾಯ್ತು ಕೊಲೆ ರಹಸ್ಯ

ಪತಿಯಿಂದಲೇ ಘೋರ ಕೃತ್ಯ: ಮೂರು ತಿಂಗಳ ನಂತರ ಬಯಲಾಯ್ತು ಕೊಲೆ ರಹಸ್ಯ

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಲೆ ಮಾಡಿ ಮೃತದೇಹವನ್ನು ಹೂತು ಹಾಕಿದ್ದಾನೆ.

ಮೂರು ತಿಂಗಳ ನಂತರ ಕೊಲೆ ರಹಸ್ಯ ಬಯಲಾಗಿದೆ. 29 ವರ್ಷದ ಶಾಂತಿ ಕೊಲೆಯಾದ ಮಹಿಳೆ. ಸಕಲೇಶಪುರ ತಾಲೂಕು ಬಾಗೇ ಗ್ರಾಮದ ಸಮೀಪ ಮಹಿಳೆಯ ಆಸ್ತಿ ಪಂಜರ ಪತ್ತೆಯಾಗಿದ್ದು, ಸಕಲೇಶಪುರ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತ ಶಾಂತಿ ಅವರ ಪತಿ ಆರೋಪಿ ಪವನ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಂಪತಿಯ ನಡುವೆ ಜಗಳದ ವೇಳೆ ಪತ್ನಿ ಮೇಲೆ ಹಲ್ಲೆ ನಡೆಸಿ ಪವನ್ ಕುಮಾರ್ ಕೊಲೆ ಮಾಡಿದ್ದ. ಮನೆ ಸಮೀಪ ಇರುವ ಹಳ್ಳದ ಬಳಿ ಗುಂಡಿ ತೆಗೆದು ಮೃತದೇಹ ಹೂತು ಹಾಕಿದ್ದ.

ನಾಯಿಗಳು ಗುರುವಾರ ದೇಹದ ಮೂಳೆಗಳನ್ನು ಎಳೆದಾಡಿದ್ದು, ತೋಟದ ಮಾಲೀಕರು ಸಕಲೇಶಪುರ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಪವನ್ ಕುಮಾರ್ ಪತ್ನಿ ಕೊಲೆ ಮಾಡಿ ಮೃತದೇಹ ಹೂತು ಹಾಕಿದ ನಂತರ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿದ್ದ. ಅಲ್ಲಿ ಪತ್ನಿ ಕಳೆದು ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular