HomeKarnatakaಜಾತ್ರಾ ಮಹೋತ್ಸವದ ವಿಚಾರಕ್ಕೆ ಗಲಾಟೆ: ಸಚಿವರ ಬೆಂಬಲಿಗರು, ಜೆಡಿಎಸ್ ಮುಖಂಡನ ಬೆಂಬಲಿಗರ ನಡಿವೆ ಮಾರಾಮಾರಿ

ಜಾತ್ರಾ ಮಹೋತ್ಸವದ ವಿಚಾರಕ್ಕೆ ಗಲಾಟೆ: ಸಚಿವರ ಬೆಂಬಲಿಗರು, ಜೆಡಿಎಸ್ ಮುಖಂಡನ ಬೆಂಬಲಿಗರ ನಡಿವೆ ಮಾರಾಮಾರಿ

ಹಾಸನ: ದೇವಸ್ಥಾನದ ಜಾತ್ರಾ ಮಹೋತ್ಸವದ ವಿಚಾರವಾಗಿ ಸಚಿವರ ಬೆಂಬಲಿಗರು ಹಾಗೂ ಜೆಡಿಎಸ್ ಮುಖಂಡರ ಬೆಂಬಲಿಗರ ನಡುವೆ ಗಲಾಟೆ ನಡೆದು ಮಾರಾಮಾರಿ ನಡೆದಿರುವ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಸೈದರಹಳ್ಳಿಯಲ್ಲಿ ನಡೆದಿದೆ.

ಎರಡೂ ಗುಂಪುಗಳು ದೊಣ್ಣೆ, ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದು, ಪ್ರಕ್ಷುಬ್ಧವಾತಾವರಣ ನಿರ್ಮಾಣವಾಗಿದೆ. ಗಲಾಟೆ ವೇಳೆ 6 ಜನರಿಗೆ ಗಾಯಗಳಾಗಿವೆ. ಒಂದು ಮನೆ ಕೂಡ ಜಖಂಗೊಂಡಿದೆ. ಗಾಯಾಳುಗಳನ್ನು ಅರಸಿಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೈದರಹಳ್ಳಿ ಗ್ರಾಮದಲ್ಲಿ ದೇವಸ್ಥಾನದ ಜಾತ್ರಾ ಮಹೋತ್ಸವದ ಕುರಿತು ಚರ್ಚೆಯಾಗುತ್ತಿತ್ತು. ಸಚಿವ ಶಿವಲಿಂಗೇಗೌಡ ಆಪ್ತ ನಂಜುಂಡಸ್ವಾಮಿ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು. ವಾಗ್ವಾದ ನಡೆದು ಎರಡೂ ಗುಂಪುಗಳ ನಡುವೆ ಗಲಾಟೆ ತಾರಕ್ಕೇರಿದೆ.

ಈ ವೇಳೆ ಉಬಯ ನಾಯಕರ ಬೆಂಬಲಿಗರು ದೊಣ್ಣೆ, ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮನೆ ಮೇಲೆ ದಾಳಿ ನಡೆಸಿ ಕಿಟಕಿಗಳನ್ನು ಒಡೆದು ಹಾಕಲಾಗಿದೆ. ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular