HomeKarnatakaSHOCKING NEWS: ಶಾಲೆಗೆ ತೆರಳುತ್ತಿದ್ದ ಶಿಕ್ಷಕಿ ಕಿಡ್ನ್ಯಾಪ್; ಸಿನಿಮೀಯ ರೀತಿಯಲ್ಲಿ ಹೊತ್ತೊಯ್ದ ಗ್ಯಾಂಗ್

SHOCKING NEWS: ಶಾಲೆಗೆ ತೆರಳುತ್ತಿದ್ದ ಶಿಕ್ಷಕಿ ಕಿಡ್ನ್ಯಾಪ್; ಸಿನಿಮೀಯ ರೀತಿಯಲ್ಲಿ ಹೊತ್ತೊಯ್ದ ಗ್ಯಾಂಗ್

ಹಾಸನ: ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯೋರ್ವರನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಬಿಟ್ಟಗೌಡನಹಳ್ಳಿಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಅರ್ಪಿತಾ ಅಪಹರಣಕ್ಕೊಳಗಾದ ಶಿಕ್ಷಕಿ. ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ರಾಮು ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ಶಿಕ್ಷಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಪಿತಾಳನ್ನು ಮದುವೆ ಮಾಡಿಕೊಡುವಂತೆ 15 ದಿನಗಳ ಹಿಂದೆ ರಾಮು ಎಂಬಾತ ಮನೆಗೆ ಬಂದು ಕೇಳಿದ್ದ. ಇದಕ್ಕೆ ಪೋಷಕರು ಹಾಗೂ ಶಿಕ್ಷಕಿ ಅರ್ಪಿತಾ ಕೂಡ ಒಪ್ಪಿರಲಿಲ್ಲ. ಇದೇ ಕಾರಣಕ್ಕಾಗಿ ರಾಮು ಎಂಬಾತನೇ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಪೋಷಕರು ದೂರಿದ್ದಾರೆ.

ಶಿಕ್ಷಕಿ ಬೆಳಿಗ್ಗೆ ಶಾಲೆಗೆ ಹೋಗುವುದನ್ನೇ ಕಾದು ನಿಂತಿದ್ದ ದುಷ್ಕರ್ಮಿಗಳ ಗ್ಯಾಂಗ್, ಆಕೆ ರಸ್ತೆಯಲ್ಲಿ ಹೋಗುತ್ತಿದ್ದಾಗ 2-3 ವ್ಯಕ್ತಿಗಳು ಶಿಕ್ಷಕಿಯನ್ನು ಹಿಡಿದು ಇನೋವಾ ಕಾರಿನಲ್ಲಿ ತುಂಬಿ ಕರೆದೊಯ್ದಿದ್ದಾರೆ. ಶಿಕ್ಷಕಿಯ ಅಪಹರಣದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular