HomeLatest NewsBREAKING: ಆಯ ತಪ್ಪಿ ಕೆಳಗೆ ಬಿದ್ದ ಬಾಲಕಿ ಮೇಲೆ ಹರಿದ ಬಸ್: 4 ವರ್ಷದ ಮಗು...

BREAKING: ಆಯ ತಪ್ಪಿ ಕೆಳಗೆ ಬಿದ್ದ ಬಾಲಕಿ ಮೇಲೆ ಹರಿದ ಬಸ್: 4 ವರ್ಷದ ಮಗು ಸ್ಥಳದಲ್ಲೇ ಸಾವು

ಹಾಸನ: ಬಸ್ ಹತ್ತುವಾಗ ಬಾಲಕಿಯೊಬ್ಬಳು ಆಯ ತಪ್ಪಿ ಕೆಳಗೆ ಬಿದ್ದಿದ್ದು, ಗೊತ್ತಾಗದೇ ಚಾಲಕ ಬಸ್ ಚಲಿಸಿದ ಪರಿಣಾಮ ಬಸ್ ಚಕ್ರದಡಿ ಸಿಲುಕಿ ಬಾಲಕಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊಳಲ್ಕೆರೆ ಗೇಟ್ ಬಳಿ ಬಾಲಕಿ ತನ್ನ ತಾಯಿ ಜೊತೆ ಬಸ್ ಹತ್ತುವಾಗ ಈ ದುರಂತ ಸಂಭವಿಸಿದೆ. 4 ವರ್ಷದ ಭಾರ್ಗವಿ ಮೃತ ಬಾಲಕಿ.

ಬಾಲಕಿ ಬಾರ್ಗವಿ ತನ್ನ ತಾಯಿ ಯಮುನಾ ಜೊತೆ ದೊಡ್ಡಮೇಟಿಕುರ್ಕೆಯಲ್ಲಿರುವ ಆಸ್ಪತ್ರೆಗೆ ತೆರಳುತ್ತಿದ್ದಳು. ಈ ವೇಳೆ ಹೊಳಲ್ಕೆರೆ ಗೇಟ್ ಬಳಿ ಬಸ್ ಹತ್ತುವಾಗ ಆಯ ತಪ್ಪಿ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಬಸ್ ಮುಂದೆ ಚಲಿಸಿದೆ. ಬಸ್ ಚಕ್ರಕ್ಕೆ ಸಿಲುಕಿದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular