HomeLatest NewsBREAKING: ನಿರಂತರ ಮಳೆಗೆ ಆನೆಮಹಲ್ ಬಳಿ ಭೂಕುಸಿತ: ಆತಂಕದಲ್ಲೇ ವಾಹನ ಸವಾರರ ಓಡಾಟ

BREAKING: ನಿರಂತರ ಮಳೆಗೆ ಆನೆಮಹಲ್ ಬಳಿ ಭೂಕುಸಿತ: ಆತಂಕದಲ್ಲೇ ವಾಹನ ಸವಾರರ ಓಡಾಟ

ಹಾಸನ: ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಸಾಲು ಸಾಲು ಅವಾಂತರಗಳು ಸಂಭವಿಸುತ್ತಿವೆ. ಹಲವೆಡೆ ಗುಡ್ಡ ಕುಸಿತ, ಮನೆ ಗೋಡೆ ಕುಸಿತದಂತಹ ಅನಾಹುತಗಳು ಸಂಭವಿಸುತ್ತಿವೆ. ಈ ನಡುವೆ ಹಾಸನದ ಆನೆಮಹಲ್ ಬಳಿ ಭೂಕುಸಿತವಾಗುತ್ತಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆಮಹಲ್ ಬಳಿ ಭೂಕುಸಿತವಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಕ್ಷಣ ಕ್ಷಣಕ್ಕೂ ಮಣ್ಣು ಕುಸಿದು ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರು, ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನೆಮಹಲ್ ಬಳಿ ವಾಹನ ಸವಾರರು ಜೀವಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಶಿರಾಡಿಘಾಟ್ ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಧಾರಾಕಾರ ಮಳೆಯಿಂದಾಗಿ ಶಿರಾಡಿಘಾತ್ ನ ಹಲವೆಡೆ ಭೂಕುಸಿತ ಸಂಭವಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular