HomeKarnatakaBIG NEWS: ಟಿಪ್ಪರ್ ವಾಹನ- ಬೈಕ್ ಅಪಘಾತ; ತಾಯಿ ಸ್ಥಳದಲ್ಲೇ ದುರ್ಮರಣ; ಮಗನ ಸ್ಥಿತಿ ಗಂಭೀರ

BIG NEWS: ಟಿಪ್ಪರ್ ವಾಹನ- ಬೈಕ್ ಅಪಘಾತ; ತಾಯಿ ಸ್ಥಳದಲ್ಲೇ ದುರ್ಮರಣ; ಮಗನ ಸ್ಥಿತಿ ಗಂಭೀರ

ಹಾಸನ: ಬೈಕ್ ನಲ್ಲಿ ತೆರಳುತ್ತಿದ್ದ ತಾಯಿ ಮಗನಿಗೆ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ತಾಯಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಿ.ಎಂ.ರಸ್ತೆಯಲ್ಲಿ ನಡೆದಿದೆ.

ಮಂಜುಳಮ್ಮ (45) ಮೃತ ದುರ್ದೈವಿ. ಪುತ್ರ ಮನೋಜ್ ಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಮಾಳೆಕೊಪ್ಪಲು ಗ್ರಾಮದ ನಿವಾಸಿಗಳು.

ಟಿಪ್ಪರ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular