SHOCKING: ಹಸು ಕಳ್ಳಸಾಗಣೆದಾರರ ಅಪಹರಿಸಿ ಸಜೀವ ದಹನ

ಆಘಾತಕಾರಿ ಘಟನೆಯೊಂದರಲ್ಲಿ, ಗುರುವಾರ ರಾಜಸ್ಥಾನದ ಭರತ್‌ ಪುರದ ಗೋಪಾಲ್‌ ಗಢ ಗ್ರಾಮದಿಂದ ಇಬ್ಬರು ಹಸು ಕಳ್ಳಸಾಗಣೆದಾರರನ್ನು ಅಪಹರಿಸಲಾಗಿದ್ದು, ಹರಿಯಾಣದ ಲುಹರು ಜಿಲ್ಲೆಯಲ್ಲಿ ಜೀವಂತವಾಗಿ ಸುಟ್ಟು ಹಾಕಲಾಗಿದೆ.

ಪೊಲೀಸರ ಪ್ರಕಾರ, ವಾಹನವು ಭರತ್‌ ಪುರದಿಂದ ಹೋಗಿದ್ದು, ಹರಿಯಾಣಕ್ಕೆ ಪ್ರವೇಶಿಸಿದ ನಂತರ ಬೆಂಕಿ ಹೊತ್ತಿಕೊಂಡಿದೆ.

ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ವಾಹನವೊಂದು ಸುಟ್ಟು ಹೋಗಿರುವುದು ಪತ್ತೆಯಾಗಿದೆ ಎಂದು ಭರತ್‌ ಪುರ ಐಜಿ ಗೌರವ್ ಶ್ರೀವಾಸ್ತವ ಖಚಿತಪಡಿಸಿದ್ದು, ಹಸು ಕಳ್ಳಸಾಗಾಣಿಕೆದಾರರ ಮೃತದೇಹಗಳನ್ನು ಒಳಗೊಂಡ ವಾಹನ ಇದಾಗಿದ್ದು, ಈ ವಿಷಯವನ್ನು ಪರಿಶೀಲಿಸಲು ಗೋಪಾಲಗಢ ಎಸ್‌ಹೆಚ್‌ಒ ಹಾಜರಾಗಿದ್ದಾರೆ ಎಂದು ಶ್ರೀವಾಸ್ತವ ಹೇಳಿದರು.

ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read