HomeEntertainmentವೇದಿಕೆ ಮೇಲೆಯೇ ಗಾಯಕನಿಗೆ ಮಹಿಳೆಯಿಂದ ಲೈಂಗಿಕ ದೌರ್ಜನ್ಯ; ನೋವಿನ ಘಟನೆ ಹಂಚಿಕೊಂಡ ಸಂಧು

ವೇದಿಕೆ ಮೇಲೆಯೇ ಗಾಯಕನಿಗೆ ಮಹಿಳೆಯಿಂದ ಲೈಂಗಿಕ ದೌರ್ಜನ್ಯ; ನೋವಿನ ಘಟನೆ ಹಂಚಿಕೊಂಡ ಸಂಧು

ನಟ ಹಾಗೂ ಗಾಯಕ ಹಾರ್ಟಿ ಸಂಧು ಇತ್ತೀಚಿಗೆ ತಮಗೆ ಮಹಿಳೆಯೊಬ್ಬರಿಂದಾದ ಲೈಂಗಿಕ ಕಿರುಕುಳದ ಬಗ್ಗೆ ಶಾಕಿಂಗ್​ ಮಾಹಿತಿಯೊಂದನ್ನ ಬಾಯ್ಬಿಟ್ಟಿದ್ದಾರೆ.
ತಾವು ಭಾಗಿಯಾಗಿದ್ದ ಕಾನ್ಸರ್ಟ್​ನಲ್ಲಿ ಪ್ರೇಕ್ಷಕಳಾಗಿ ಆಗಮಿಸಿದ್ದ ಮಹಿಳೆಯೊಬ್ಬರು ತಮ್ಮೊಂದಿಗೆ ಅನುಚಿತ ವರ್ತನೆ ತೋರಿದ್ದಾಳೆ ಎಂದು ಸಂಧು ಆರೋಪಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದ ಘಟನೆಯಿದು. ಖಾಸಗಿ ವಿವಾಹ ಕಾರ್ಯಕ್ರಮವೊಂದರ ಕಾನ್ಸರ್ಟ್​ನಲ್ಲಿ ನಾನು ಭಾಗಿಯಾಗಿದ್ದೆ. ಆಗ ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 40 ರಿಂದ 45 ವರ್ಷದ ಪ್ರಾಯದ ಮಹಿಳೆಯೊಬ್ಬರು ನನ್ನೊಂದಿಗೆ ಹೆಜ್ಜೆ ಹಾಕಬೇಕೆಂದು ಬಯಸಿದರು. ಸರಿ ಎಂದು ನಾನು ನೃತ್ಯ ಮಾಡಿದೆ. ಕೂಡಲೇ ಆಕೆ ನಿಮ್ಮನ್ನು ನಾನು ತಬ್ಬಿಕೊಳ್ಳಬಹುದೇ..? ಎಂದು ಕೇಳಿದಳು. ನಾನು ಸರಿ ಎಂದು ಹೇಳಿದೆ. ಆಕೆ ನನ್ನನ್ನು ತಬ್ಬಿಕೊಂಡಳು. ಆದರೆ ಕೂಡಲೇ ನನ್ನ ಕಿವಿಯನ್ನು ನೆಕ್ಕಿದಳು. ಇದೇ ಕೆಲಸ ನಾನು ಮಾಡುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು..? ಎಂದು ಪ್ರಶ್ನಿಸಿದ್ದಾರೆ.

ಸಂಧು ಈ ಘಟನೆಯ ಬಗ್ಗೆ ಹೇಳಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಪ್ರತಿಯೊಂದನ್ನು ಹೇಳಿಕೊಳ್ಳಲು ಸರಿಯಾದ ಸಮಯ ಬೇಕು. ಹೀಗಾಗಿ ನಾನು ಈ ವಿಚಾರವನ್ನು ಹಂಚಿಕೊಳ್ಳಲು ಇಷ್ಟು ಸಮಯ ತೆಗೆದುಕೊಂಡೆ. ನಾನು ನನ್ನ ಅಭಿಮಾನಿಯನ್ನು ನೋಡಲು ಎಂದಿಗೂ ಉತ್ಸುಕನಾಗಿದ್ದೇನೆ. ಆದರೆ ಇಂತಹ ಘಟನೆಗಳು ನಮಗೆ ತುಂಬಾನೆ ನೋವುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular