HomeIndiaBIG NEWS: ಗೆಳತಿ ಭೇಟಿಗೆ ಬಂದು ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಹರಿಯಾಣ ನಕ್ಸಲ್ ನಾಯಕ

BIG NEWS: ಗೆಳತಿ ಭೇಟಿಗೆ ಬಂದು ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಹರಿಯಾಣ ನಕ್ಸಲ್ ನಾಯಕ

ಬೆಂಗಳೂರು: ಹರಿಯಾಣ ಮೂಲದ ನಕ್ಸಲ್ ನಾಯಕನನ್ನು ಬೆಂಗಳೂರಿನಲ್ಲಿ ಕೇಂದ್ರ ಅಪರಾಧ ವಿಭಾಗದ ಎಟಿಸಿ ತಂಡ ಬಂಧಿಸಿದೆ.

ಹರಿಯಾಣ ಮೂಲದ ನಕ್ಸಲ್ ಅನಿರುದ್ಧ್ ಬಂಧಿತ. ಆರೋಪಿ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಎಟಿಸಿ ತಂಡ ವಿಚಾರಣೆ ನಡೆಸಿದೆ.

ಅನಿರುದ್ಧ್ ನಿಷೇಧಿತ ಸಿಪಿಐ(ಎಂ) ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ನಿಷೇಧಿತ ಬರಹಗಳನ್ನು ಬರೆದು ಪೋಸ್ಟ್ ಮಾಡುತ್ತಿದ್ದ. ಈತನಿಗಾಗಿ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ತಂಡ ಹುಡುಕಾಟ ನಡೆಸಿತ್ತು. ಇದೀಗ ಬೆಂಗಳೂರಿಗೆ ಗೆಳತಿ ಭೇಟಿಗೆಂದು ಬಂದಿದ್ದ ಅನಿರುದ್ಧ್ ನನ್ನು ಎಟಿಸಿ ಅಧಿಕಾರಿಗಳು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿಗೆ ಬಂದು ಗೆಳತಿ ಭೇಟಿ ಬಳಿಕ ಚೆನ್ನೈಗೆ ಹೋಗಲು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಣಕ್ಕೆ ಬಂದಿದ್ದ ವೇಳೆ ಆತನನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular