HomeLive NewsBIG NEWS: ಹರಿಹರ ನಗರಸಭೆ ವ್ಯವಸ್ಥಾಪಕಿ ಸಸ್ಪೆಂಡ್

BIG NEWS: ಹರಿಹರ ನಗರಸಭೆ ವ್ಯವಸ್ಥಾಪಕಿ ಸಸ್ಪೆಂಡ್

ದಾವಣಗೆರೆ: ಲೋಕಸಭಾ ಚುನಾವಣೆಯ ವೇಳೆ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪದಲ್ಲಿ ಹರಿಹರ ನಗರಸಭೆ ವ್ಯವಸ್ಥಾಪಕಿಯನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

ಹೆಚ್.ನಿರಂಜನಿ ಅಮಾನತುಗೊಂಡ ಅಧಿಕಾರಿ. ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಕರ್ತವ್ಯ ಲೋಪ ಆರೋಪದಲ್ಲಿ ನಿರಂಜನಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೊನ್ನಾಳಿಯ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಯಾಗಿದ್ದ ವೇಳೆ ಹಣ ದುರುಪಯೋಗ ಪಡಿಸಿಕೊಂಡಿದ್ದರು. ಬಳಿಕ ಹರಿಹರ ನಗರಸಭೆ ವ್ಯವಸ್ಥಾಪಕಿಯಾಗಿ ವರ್ಗಾವಣೆಗೊಂಡ ಬಳಿಕವೂ ಕಂದಾಯ ಅಧಿಕರಿಯಾಗಿ ಬಿ ಖಾತಾ ವಿತರಣೆಯಲ್ಲಿ, ದಾಖಲೆಗಳ ಕೊಠಡಿ ನಿರ್ವಹಣೆಯಲ್ಲಿ ಕರ್ತವ್ಯ ಲೋಪವೆಸಗಿದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಿರಂಜನಿ ಅವರನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular