HomeIndiaಐಪಿಎಲ್ 2024, ಅಫ್ಘಾನಿಸ್ತಾನ ಸರಣಿಗೆ ʻಹಾರ್ದಿಕ್ ಪಾಂಡ್ಯʼ ಆಡುವುದು ʻಅನುಮಾನʼ : ವರದಿ

ಐಪಿಎಲ್ 2024, ಅಫ್ಘಾನಿಸ್ತಾನ ಸರಣಿಗೆ ʻಹಾರ್ದಿಕ್ ಪಾಂಡ್ಯʼ ಆಡುವುದು ʻಅನುಮಾನʼ : ವರದಿ

ನವದೆಹಲಿ: ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ರಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ. ಪಾದದ ಗಾಯದಿಂದ ಬಳಲುತ್ತಿರುವ ಪಾಂಡ್ಯ ಪ್ರಸ್ತುತ   ಟೀಂ  ಇಂಡಿಯಾದಿಂದ ಹೊರಗುಳಿದಿದ್ದಾರೆ.

ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು.  ಅಫ್ಘಾನಿಸ್ತಾನ ಟಿ 20 ಸರಣಿಗೆ ಮೊದಲು ಹಾರ್ದಿಕ್ ಚೇತರಿಸಿಕೊಳ್ಳುವ ನಿರೀಕ್ಷೆಯಿತ್ತು ಆದರೆ ವರದಿಯ ಪ್ರಕಾರ, ಆಲ್ರೌಂಡರ್ ಟಿ 20 ಸರಣಿ ಮತ್ತು ಐಪಿಎಲ್ ಎರಡರಿಂದಲೂ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗೆ ಐಪಿಎಲ್‌ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ನೇಮಕಗೊಂಡಿರುವ  ಹಾರ್ದಿಕ್ ಅವರ ಫಿಟ್ನೆಸ್ ಸ್ಥಿತಿಯ ಬಗ್ಗೆ ಸದ್ಯಕ್ಕೆ ಯಾವುದೇ ನವೀಕರಣವಿಲ್ಲ ಮತ್ತು ಐಪಿಎಲ್ ನಲ್ಲೂ ಅವರು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ ಎಂದು ವರದಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular