ಸಾಲ ತೀರಿಸಲು ಸ್ನೇಹಿತರೊಂದಿಗೆ ಸೆಕ್ಸ್ ಗೆ ಕಿರುಕುಳ: ಒಪ್ಪದಿದ್ದಕ್ಕೆ ಪತ್ನಿಯ ಕೊಲೆಗೈದ ಪತಿ

ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುಣಸಗಿಯಲ್ಲಿ ಬೇರೆ ಪುರುಷರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತ್ನಿಗೆ ಪೀಡಿಸಿದ ವ್ಯಕ್ತಿಯೊಬ್ಬ ಆಕೆ ಒಪ್ಪುತ್ತಿದ್ದಾಗ ಕೊಲೆ ಮಾಡಿದ್ದಾನೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹುಣಸಗಿಯ ಭೀಮಣ್ಣ ಭಾಗಲೇರ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಭೀಮಣ್ಣ ಭಾಗಲೇರನನ್ನು ಬಂಧಿಸಲಾಗಿದೆ.

ಗಂಗನಾಳ ಗ್ರಾಮದ ಮಹಿಳೆ ಕಳೆದ  ಜುಲೈ 25 ರಂದು ಗಂಡನ ಜೊತೆ ರೂಮ್ ನಲ್ಲಿ ಮಲಗಿದ್ದಾಗ ಮೃತಪಟ್ಟಿದ್ದರು. ಮೃತ ಮಹಿಳೆಯ ಸಹೋದರ ತಂಗಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗೋಗಿ ಠಾಣೆಗೆ ದೂರು ನೀಡಿದ್ದರು.

ಸೆ. 12ರಂದು ಮೃತ ಮಹಿಳೆಯ ಸಹೋದರ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ತಂಗಿಯ ಮೊಬೈಲ್ ಗಮನಿಸಿದಾಗ ಕಾಲ್ ರೆಕಾರ್ಡಿಂಗ್ ನಲ್ಲಿ ಭೀಮಣ್ಣ ಭಾಗಲೇರ ಪತ್ನಿಗೆ ಕಿರುಕುಳ ನೀಡಿರುವುದು ದಾಖಲಾಗಿದೆ. ನೀನು ಬೇರೆಯವರ ಜೊತೆ ಹಾಸಿಗೆ ಹಂಚಿಕೊಳ್ಳಬೇಕು. ಇದರಿಂದ ನನಗೆ ಖುಷಿಯಾಗುತ್ತದೆ, ಮಕ್ಕಳು ಆಗುತ್ತವೆ, ದುಡ್ಡು ಬರುತ್ತದೆ, ಸಾಲ ತೀರಿಸುತ್ತದೆ ಎಂದು ಕಿರುಕುಳ ನೀಡಿದ್ದಾನೆ. ಬೇರೆಯವರ ಜೊತೆ ಮಲಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಂತೆಯೇ ಜುಲೈ 25ರಂದು ಕೊಲೆ ಮಾಡಿದ್ದಾನೆ. ಉಳಿದವರು ಕೊಲೆ ಮಾಡಲು ಸಹಕಾರ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

2023ರ ಮೇ 30ರಂದು ತಂಗಿಯ ಮದುವೆಯಾಗಿತ್ತು. ನಂತರ ಕಿರುಕುಳ ನೀಡುತ್ತಿದ್ದ ಆರೋಪಿ, ನನಗೆ ಸಾಲ ಜಾಸ್ತಿಯಾಗಿದ್ದು, ನೀನು ಬೇರೆಯವರ ಜೊತೆ ಹೋಗಬೇಕು. ಅವರಿಗೆ ಸಹಕರಿಸಬೇಕು ಎಂದು ಕಿರುಕುಳ ನೀಡುತ್ತಿದ್ದ ಎಂದು ದೂರು ಸಲ್ಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read