HomeEntertainment61ನೇ ಜನ್ಮದಿನದ ಸಂಭ್ರಮದಲ್ಲಿ ಬಾಲಿವುಡ್ ಬಾದ್‌ಷಾ: ಶಾರುಖ್ ಖಾನ್ ಸಿನಿ ಪಯಣದ ರೋಚಕ ಕಥೆ!

61ನೇ ಜನ್ಮದಿನದ ಸಂಭ್ರಮದಲ್ಲಿ ಬಾಲಿವುಡ್ ಬಾದ್‌ಷಾ: ಶಾರುಖ್ ಖಾನ್ ಸಿನಿ ಪಯಣದ ರೋಚಕ ಕಥೆ!

ಹಿಂದಿ ಚಿತ್ರರಂಗದ ಸುಲ್ತಾನ್ ಹಾಗೂ ಜಾಗತಿಕ ಮಟ್ಟದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಖಾನ್ ಇಂದು ತಮ್ಮ 61ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಜೀವನದ ಏಳುಬೀಳುಗಳು, ಪತ್ರಕರ್ತರೊಂದಿಗಿನ ವೈಮನಸ್ಯ ಹಾಗೂ ಕುಟುಂಬದ ಮೇಲ ಬಂದೆರಗಿದ ಬಿರುಗಾಳಿಯಂತಹ ಕಷ್ಟಗಳನ್ನು ಮೆಟ್ಟಿ ನಿಂತು ಶಾರುಖ್ ಖಾನ್ ಮತ್ತೊಮ್ಮೆ ತಮ್ಮ ಬಾದ್‌ಷಾ ಪಟ್ಟವನ್ನು ಸಾಬೀತುಪಡಿಸಿದ್ದಾರೆ.

2018ರಲ್ಲಿ ತೆರೆಕಂಡ ಜೀರೋ ಸಿನಿಮಾದ ಸೋಲಿನ ನಂತರ ಹಾಗೂ 2021ರಲ್ಲಿ ಮಗ ಆರ್ಯನ್ ಖಾನ್ ಎದುರಿಸಿದ ಕಠಿಣ ಸವಾಲುಗಳ ಸಮಯದಲ್ಲಿ ಅನೇಕರು ಶಾರುಖ್ ಖಾನ್ ವೃತ್ತಿಜೀವನ ಮುಗಿಯಿತು ಎಂದೇ ಭಾವಿಸಿದ್ದರು. ಆದರೆ ಅತ್ಯಂತ ಧೈರ್ಯದಿಂದ ಎಲ್ಲವನ್ನೂ ಎದುರಿಸಿದ ಕಿಂಗ್ ಖಾನ್, 2023ರಲ್ಲಿ ಪಠಾನ್ ಮತ್ತು ಜವಾನ್ ನಂತಹ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದರು. ಆರ್ಯನ್ ಖಾನ್ ಕೂಡ ನಿರ್ದೇಶಕನಾಗಿ ಒಟಿಟಿ ಜಗತ್ತಿಗೆ ಕಾಲಿಟ್ಟು ದೊಡ್ಡ ಯಶಸ್ಸು ಕಂಡಿದ್ದು, ಮಗನ ಸಾಧನೆ ತಂದೆಯಾಗಿ ಶಾರುಖ್‌ಗೆ ಮತ್ತಷ್ಟು ಹೆಮ್ಮೆ ತಂದಿದೆ.

ಇದಲ್ಲದೆ ಶಾರುಖ್ ಖಾನ್ ಅಭಿನಯದ ಮುಂಬರುವ ‘ಕಿಂಗ್’ ಚಿತ್ರದ ವಿದೇಶಿ ಥಿಯೇಟ್ರಿಕಲ್ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿವೆ. ಫಾರ್ಸ್ ಫಿಲ್ಮ್ ಸಂಸ್ಥೆಯು ಈ ಚಿತ್ರದ ಅಂತಾರಾಷ್ಟ್ರೀಯ ಹಕ್ಕುಗಳನ್ನು ಬರೋಬ್ಬರಿ 175 ಕೋಟಿ ರೂಪಾಯಿಗಳ ಮಿನಿಮಮ್ ಗ್ಯಾರಂಟಿ ಒಪ್ಪಂದದಡಿ ಖರೀದಿಸಿದ್ದು, ಇದು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚಿನ ಮೊತ್ತದ ಒಪ್ಪಂದವಾಗಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು ಈ ವರ್ಷದ ಕ್ರಿಸ್‌ಮಸ್ ವೇಳೆಗೆ ಅಂದರೆ ಡಿಸೆಂಬರ್ 24 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಪ್ರತಿಯೊಂದು ಏಳಿಗೆ ಮತ್ತು ಹಿನ್ನಡೆಯಲ್ಲೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುತ್ತಲೇ ಬಂದಿರುವ ಶಾರುಖ್, ಇಂದು ತಮ್ಮ ಜನ್ಮದಿನದ ಅಂಗವಾಗಿ ಮುಂಬೈನ ‘ಮನ್ನತ್’ ಬಂಗಲೆಯ ಗ್ಯಾಲರಿಯಲ್ಲಿ ನಿಂತು ಅಭಿಮಾನಿಗಳಿಗೆ ದರ್ಶನ ನೀಡುವ ನಿರೀಕ್ಷೆಯಿದೆ. 61 ವರ್ಷದಲ್ಲೂ ಅದೇ ಮುಗುಳ್ನಗು ಮತ್ತು ಚಾರ್ಮ್ ಕಾಯ್ದುಕೊಂಡಿರುವ ಶಾರುಖ್ ಖಾನ್‌ಗೆ ಜಗತ್ತಿನಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular