ಬಾಗಲಕೋಟೆ: ಜಿಲ್ಲೆಯಲ್ಲೊಂದು ಭೀಕರ ರಸ್ತೆ ಅಪಘಾತದಲ್ಲಿ ಯುವಕನ ಕೈ ಸಂಪೂರ್ಣವಾಗಿ ಕತ್ತರಿಹೋಗಿದರೂ, ಧೈರ್ಯ ಕಳೆದುಕೊಳ್ಳದೇ ಕತ್ತರಿಸಿದ ಕೈಯನ್ನೇ ಹಿಡಿದು ಆಸ್ಪತ್ರೆಗೆ ಬಂದ ಘಟನೆ ನಡೆದಿದೆ.
ಹೌದು. ಭೀಕರ ಕಾರು ಅಪಘಾತದಲ್ಲಿ ಯುವಕನೊಬ್ಬನ ಕೈ ಮಣಿಕಟ್ಟಿನ ಭಾಗದಲ್ಲಿ ಸಂಪೂರ್ಣವಾಗಿ ಕತ್ತರಿಹೋದರೂ ಧೈರ್ಯ ಕಳೆದುಕೊಳ್ಳದೆ, ಕತ್ತರಿಸಿದ ಕೈಯನ್ನೇ ಹಿಡಿದು ಆಸ್ಪತ್ರೆಗೆ ಬಂದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ರೋಹನ್ ಎಂಬ ಯುವಕ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು ಪಲ್ಟಿಯಾಗಿದ್ದು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ಘಟನೆ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ರೋಹನ್ ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಭೀಕರ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರು ಪಲ್ಟಿಯಾದ ಪರಿಣಾಮ ರೋಹನ್ ಅವರ ಒಂದು ಕೈ ಮಣಿಕಟ್ಟಿನ ಭಾಗದಲ್ಲಿ ಸಂಪೂರ್ಣವಾಗಿ ಕಟ್ ಆಗಿದೆ. ತುಂಡಾಗಿದ್ದ ಎಡಗೈಯನ್ನು ಪ್ಲಾಸ್ಟಿಕ್ ಕವರ್ ಗೆ ಹಾಕಿಕೊಂಡು ಬಂದಿದ್ದಾನೆ. ಜಮಖಂಡಿಯಿಂದ ಸಾವಳಗಿಗೆ ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.. ವೈದ್ಯರು ಗಾಯಾಳುವಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದು, ಕತ್ತರಿಸಿದ ಕೈಯನ್ನು ಮರುಜೋಡಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

