HomeKarnatakaBIG NEWS: ಹಂಪಿಯ ಬಳಿ ಅಕ್ರಮ ರೆಸಾರ್ಟ್ ನಿರ್ಮಾಣ; 11 ಮಾಲೀಕರ ವಿರುದ್ಧ ದೂರು ದಾಖಲು

BIG NEWS: ಹಂಪಿಯ ಬಳಿ ಅಕ್ರಮ ರೆಸಾರ್ಟ್ ನಿರ್ಮಾಣ; 11 ಮಾಲೀಕರ ವಿರುದ್ಧ ದೂರು ದಾಖಲು

ಕೊಪ್ಪಳ: ಪಾರಂಪರಿಕ ತಾಣ ಹಂಪಿಯ ಸುತ್ತ ಮುತ್ತ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿದ್ದ 11 ರೆಸಾರ್ಟ್ ಮಾಲೀಕರ ವಿರುದ್ಧ ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ಪಡೆಯದೇ ರೆಸಾರ್ಟ್ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನುಮತಿ ಪಡೆಯದೇ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿರುವುದು ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ 11 ರೆಸಾರ್ಟ್ ಮಾಲೀಕರ ವಿರುದ್ಧ ಅಧಿಕರಿಗಳು ಪ್ರಕರಣ ದಾಖಲಿಸಿದ್ದಾರೆ. ಹಂಪಿ ವಿಶ್ವಪಾರಂಪರೆ ಪ್ರಾಧಿಕಾರ ವ್ಯಾಪ್ತಿಯ ಅನಧಿಕೃತ ರೆಸಾರ್ಟ್ ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿದ್ದಾರೆ.

ಆನೆಗುಂದಿ ಸುತ್ತಮುತ್ತಲಿನ ಪೀಪಲ್ ಟ್ರೀ ರೆಸಾರ್ಟ್, ನೇಚರ್ ಕಾಟೇಜ್, ವೈಲ್ಡ್ ಸ್ಟೋನ್ ಸಾಣಾಪುರ, ದಿ ಕಿಂಗ್, ಲೇಜಿ ಪಾಂಡಾ, ಕೋಕೋನಟ್ ಟ್ರೀ ಸೇರಿದಂತೆ 11 ರೆಸಾರ್ಟ್ ಗಳ ವಿರುದ್ಧ ಹಾಗೂ ಭೂ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular