BIG NEWS: ಬೆಂಗಳೂರಿನ ಐತಿಹಾಸಿಕ HAL ಗೆ ‘ಮಹಾರತ್ನ’ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರ: ಈ ಪಟ್ಟಿಗೆ ಸೇರಿದ 14ನೇ ಕಂಪನಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ಏರೋ ಸ್ಪೇಸ್ ಹಾಗೂ ರಕ್ಷಣಾ ವಲಯದ ಕಂಪನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್ಎಎಲ್)ಗೆ ಕೇಂದ್ರ ಸರ್ಕಾರ ಮಹಾರತ್ನ ಸ್ಥಾನಮಾನ ನೀಡಿದೆ.

ಈ ಸ್ಥಾನಮಾನ ಪಡೆದ 14ನೇ ಕಂಪನಿಯಾಗಿ ಹೆಚ್ಎಎಲ್ ಗುರುತಿಸಿಕೊಂಡಿದೆ. ಮಹಾರತ್ನ ದರ್ಜೆಗೆ ಏರಿರುವುದರಿಂದ ಹೆಚ್.ಎಎ.ಎಲ್.ಗೆ ಹೆಚ್ಚಿನ ಸ್ವಾಯತ್ತ ಸ್ಥಾನಮಾನ ಲಭ್ಯವಾಗಲಿದೆ. ಬೆಂಗಳೂರಿನ ಐತಿಹಾಸಿಕ ಕಂಪನಿಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮಹಾರತ್ನ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಸಾರ್ವಜನಿಕ ಉದ್ಯಮಗಳ ಇಲಾಖೆ ಮಾಹಿತಿ ನೀಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರಿ ಸ್ವಾಮ್ಯದ ಹೆಚ್.ಎ.ಎಲ್. ಅನ್ನು ಮಹಾರತ್ನ ದರ್ಜೆಗೆ ಮುಂಬಡ್ತಿ ನೀಡಲು ಅನುಮತಿ ನೀಡಿರುವುದಾಗಿ ತಿಳಿಸಲಾಗಿದೆ.

ವಾರ್ಷಿಕ 28,162 ಕೋಟಿ ರೂಪಾಯಿ ವ್ಯವಹಾರ ಹೊಂದಿದ್ದು, 2023- 24 ನಲ್ಲಿ 7595 ಕೋಟಿ ರೂಪಾಯಿ ಲಾಭ ಗಳಿಸಿದೆ. ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ಪ್ರೊಡಕ್ಷನ್ ಗೆ ಸೇರಿದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ ಇದಾಗಿದೆ. ಮಹಾರತ್ನ ಸ್ಥಾನಮಾನದಿಂದಾಗಿ ಹೆಚ್ಎಎಲ್ ಗೆ ಸ್ವಾಯತ್ತತೆ ಹೆಚ್ಚಿನ ಹೂಡಿಕೆ ಸಾಮರ್ಥ್ಯ ಕಾರ್ಯತಂತ್ರದಲ್ಲಿ ಸ್ವಾತಂತ್ರ್ಯ ನಿರ್ಧಾರಕ್ಕೆ ಅವಕಾಶ ಸಿಗುತ್ತದೆ.

ಯಾವುದೇ ಸರ್ಕಾರದ ಅನುಮೋದನೆ ಅಗತ್ಯವಿಲ್ಲದೆ ಒಂದೇ ಯೋಜನೆಯಲ್ಲಿ 5000 ಕೋಟಿ ರೂಪಾಯಿ ಅಥವಾ ಅದರ ಮೌಲ್ಯದ ಶೇಕಡ 15ರಷ್ಟರವರೆಗೆ ಹೂಡಿಕೆ ಮಾಡಬಹುದಾಗಿದೆ. ದೇಶಿಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ವಿಲೀನಗಳು, ಸ್ವಾಧೀನಗಳು ಮತ್ತು ಕಾರ್ಯತಂತ್ರದ ಹೂಡಿಕೆಗಳನ್ನು ಕೈಗೊಳ್ಳಲು ಸ್ವಾತಂತ್ರ್ಯ ಹೊಂದಿರುತ್ತದೆ ಎಂದು ಹೇಳಲಾಗಿದೆ.

ಭಾರತದಲ್ಲಿನ ಮಹಾರತ್ನ ಕಂಪನಿಗಳ ಪಟ್ಟಿ

HAL ಭಾರತದಲ್ಲಿ 14 ನೇ ಮಹಾರತ್ನ ಕಂಪನಿಯಾಗಲಿದೆ. ಮೊದಲ 13 ಮಹಾರತ್ನ ಕಂಪನಿಗಳು ಕೆಳಕಂಡಂತಿವೆ:

1 ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (NTPC) ಲಿಮಿಟೆಡ್;

2 ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಲಿಮಿಟೆಡ್;

3 ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL);

4 ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL);

5 ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL);

6 ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL);

7 ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್);

8 GAIL ಇಂಡಿಯಾ ಲಿಮಿಟೆಡ್;

9 ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL);

10 ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್;

11 ಪವರ್ ಫೈನಾನ್ಸ್ ಕಾರ್ಪೊರೇಷನ್ (PFC);

12 ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ (REC) ಲಿಮಿಟೆಡ್; ಮತ್ತು

13 ಆಯಿಲ್ ಇಂಡಿಯಾ ಲಿಮಿಟೆಡ್ (OIL).

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read