HomeEntertainmentಹೈ ಜವಾನಿ ತೋ ಇಷ್ಕ್ ಹೋನಾ ಹೈ ಟ್ರೈಲರ್ ರಿಲೀಸ್; ವರುಣ್ ಧವನ್ ಚಿತ್ರಕ್ಕೆ ಮಿಶ್ರ...

ಹೈ ಜವಾನಿ ತೋ ಇಷ್ಕ್ ಹೋನಾ ಹೈ ಟ್ರೈಲರ್ ರಿಲೀಸ್; ವರುಣ್ ಧವನ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ಬಾಲಿವುಡ್‌ನ ಖ್ಯಾತ ನಿರ್ದೇಶಕ ಡೇವಿಡ್ ಧವನ್ ಮತ್ತು ವರುಣ್ ಧವನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಹೈ ಜವಾನಿ ತೋ ಇಷ್ಕ್ ಹೋನಾ ಹೈ ಚಿತ್ರದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಗುರುವಾರ ತಡವಾಗಿದ್ದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಶನಿವಾರ ಮುಂಬೈನಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ವರುಣ್ ಧವನ್, ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಸೇರಿದಂತೆ ಇಡೀ ಚಿತ್ರತಂಡ ಈ ವೇಳೆ ಉಪಸ್ಥಿತರಿತ್ತು.

ಡೇವಿಡ್ ಧವನ್ ಅವರ ಎಂದಿನ ಮಸಾಲಾ ಕಾಮಿಡಿ ಶೈಲಿಯಲ್ಲೇ ಈ ಸಿನಿಮಾವನ್ನು ರೂಪಿಸಲಾಗಿದೆ ಎಂಬುದು ಟ್ರೈಲರ್ ನೋಡಿದರೆ ತಿಳಿಯುತ್ತದೆ. ಒಬ್ಬ ನಾಯಕ, ಇಬ್ಬರು ನಾಯಕಿಯರು ಮತ್ತು ಸ್ನೇಹಿತರ ನಡುವೆ ನಡೆಯುವ ಗೊಂದಲ ಹಾಗೂ ಕಾಮಿಡಿ ಸನ್ನಿವೇಶಗಳು ಟ್ರೈಲರ್‌ನಲ್ಲಿ ಹೈಲೈಟ್ ಆಗಿವೆ. ಆದರೆ ಟ್ರೈಲರ್‌ನ ಕೆಲವು ದೃಶ್ಯಗಳು ಹಳೆಯ ಬಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದೆ ಎಂದು ಸಿನಿಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಟ್ರೈಲರ್ ಬಗ್ಗೆ ಸದ್ಯ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಡೇವಿಡ್ ಧವನ್ ಅವರು ಲಾಜಿಕ್ ಇಲ್ಲದಿದ್ದರೂ ಫುಲ್ ಎಂಟರ್‌ಟೈನ್‌ಮೆಂಟ್ ನೀಡಲು ರೆಡಿಯಾಗಿದ್ದಾರೆ. ವರುಣ್, ಮೃಣಾಲ್ ಮತ್ತು ಪೂಜಾ ಕಾಂಬಿನೇಷನ್ ಮಜವಾಗಿದೆ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವರು ಇದು ಹಳೇ ಕಥೆಯಾಗಿದ್ದು, ಇಂತಹ ಚಿತ್ರಗಳಿಗೆ ಹಣ ವೇಸ್ಟ್ ಮಾಡುವ ಬದಲು ಒಟಿಟಿಯಲ್ಲಿ ಒಳ್ಳೆಯ ಸಿನಿಮಾ ನೋಡಬಹುದು ಎಂದು ನೆಗೆಟಿವ್ ಕಮೆಂಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೊದಲು ಜೂನ್ 5 ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಟಾಕ್ಸಿಕ್ ಚಿತ್ರದ ಪೈಪೋಟಿ ತಪ್ಪಿಸಲು ಮೇ 22 ಕ್ಕೆ ಪ್ರೀಪೋನ್ ಆಗಿತ್ತು. ಆದರೆ ಈಗ ಟಾಕ್ಸಿಕ್ ಸಿನಿಮಾ ಮುಂದೂಡಲ್ಪಟ್ಟಿರುವುದರಿಂದ, ಹೈ ಜವಾನಿ ತೋ ಇಷ್ಕ್ ಹೋನಾ ಹೈ ಚಿತ್ರವನ್ನು ಮತ್ತೆ ಹಳೆಯ ದಿನಾಂಕಕ್ಕೇ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅದರಂತೆ ಈ ಸಿನಿಮಾ ಜೂನ್ 5 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular