HomeEntertainmentಬಾಕ್ಸ್ ಆಫೀಸ್‌ನಲ್ಲಿ ವರುಣ್ ಧವನ್ ಅಬ್ಬರ: ಬಿಡುಗಡೆಗೂ ಮುನ್ನವೇ ಸಾವಿರಾರು ಟಿಕೆಟ್ ಸೇಲ್, ಮೊದಲ ದಿನವೇ...

ಬಾಕ್ಸ್ ಆಫೀಸ್‌ನಲ್ಲಿ ವರುಣ್ ಧವನ್ ಅಬ್ಬರ: ಬಿಡುಗಡೆಗೂ ಮುನ್ನವೇ ಸಾವಿರಾರು ಟಿಕೆಟ್ ಸೇಲ್, ಮೊದಲ ದಿನವೇ ಭರ್ಜರಿ ಕಲೆಕ್ಷನ್ ನಿರೀಕ್ಷೆ

ಬಾಲಿವುಡ್ ಯುವ ನಟ ವರುಣ್ ಧವನ್, ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ರೋಮ್ಯಾಂಟಿಕ್ ಕಾಮಿಡಿ ಡ್ರಾಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ (ಅಡ್ವಾನ್ಸ್ ಬುಕ್ಕಿಂಗ್) ಪ್ರಕ್ರಿಯೆ ಈಗಾಗಲೇ ಭರ್ಜರಿಯಾಗಿ ಆರಂಭಗೊಂಡಿದೆ. ಜೂನ್ 3ರ ಬುಧವಾರ ರಾತ್ರಿ 11 ಗಂಟೆಯ ವೇಳೆಗೆ ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ ಸರಪಳಿಗಳಾದ ಪಿವಿಆರ್ ಐನಾಕ್ಸ್ ಮತ್ತು ಸಿನೆಪೋಲಿಸ್‌ಗಳಲ್ಲಿ ಈ ಚಿತ್ರದ ಮೊದಲ ದಿನದ ಪ್ರದರ್ಶನಕ್ಕಾಗಿ ಬರೋಬ್ಬರಿ 11,000 ಟಿಕೆಟ್‌ಗಳು ಮಾರಾಟವಾಗಿವೆ.

ಇತ್ತೀಚೆಗೆ ಬಿಡುಗಡೆಯಾಗಿದ್ದ ಆಯುಷ್ಮಾನ್ ಖುರಾನಾ ನಟನೆಯ ‘ಪತಿ ಪತ್ನಿ ಔರ್ ವೋ 2’ ಚಿತ್ರದ ಮುಂಗಡ ಬುಕ್ಕಿಂಗ್‌ಗೆ ಹೋಲಿಸಿದರೆ, ವರುಣ್ ಧವನ್ ಚಿತ್ರಕ್ಕೆ ದುಪ್ಪಟ್ಟು ಸ್ಪಂದನೆ ಸಿಕ್ಕಿದೆ. ಖ್ಯಾತ ಹಿರಿಯ ನಿರ್ದೇಶಕ ಡೇವಿಡ್ ಧವನ್ ಅವರ ನಿರ್ದೇಶನದ ಕೊನೆಯ ಸಿನಿಮಾ ಎನ್ನಲಾದ ಈ ಚಿತ್ರವು ಬಿಡುಗಡೆಯ ಹೊತ್ತಿಗೆ ಪ್ರಮುಖ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಚೈನ್‌ಗಳಲ್ಲಿ ಸುಮಾರು 25,000 ದಿಂದ 30,000 ಟಿಕೆಟ್‌ಗಳನ್ನು ಮಾರಾಟ ಮಾಡುವ ನಿರೀಕ್ಷೆ ಇದೆ. ಚಿತ್ರಮಂದಿರಗಳಿಗೆ ನೇರವಾಗಿ ಬಂದು ಟಿಕೆಟ್ ಖರೀದಿಸುವ ಪ್ರೇಕ್ಷಕರ (ವಾಕ್-ಇನ್ಸ್) ಸಂಖ್ಯೆಯನ್ನು ಆಧರಿಸಿ, ಈ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 7 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಭರ್ಜರಿ ಆರಂಭ ಪಡೆಯುವ ಮುನ್ಸೂಚನೆ ಸಿಕ್ಕಿದೆ.

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ರೋಮ್ಯಾಂಟಿಕ್ ಕಾಮಿಡಿ ಶೈಲಿಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಯಶಸ್ಸು ಕಾಣುತ್ತಿಲ್ಲ. ಕೆಲವೇ ಕೆಲವು ಚಿತ್ರಗಳು ಮಾತ್ರ ಗೆಲುವಿನ ನಗೆ ಬೀರಿವೆ. ಇಂತಹ ಸಂದರ್ಭದಲ್ಲಿ ವರುಣ್ ಧವನ್ ಅಭಿನಯದ ಈ ಹೊಸ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಧೂಳೆಬ್ಬಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ಶೈಲಿಯ ಇತರ ಪ್ರಮುಖ ಹಿಂದಿ ಸಿನಿಮಾಗಳ ಮಲ್ಟಿಪ್ಲೆಕ್ಸ್ ಮುಂಗಡ ಬುಕ್ಕಿಂಗ್ ಟಿಕೆಟ್ ವಿವರ ಮತ್ತು ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಹೀಗಿದೆ:

  • ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ: 50,000 ಟಿಕೆಟ್ ಮಾರಾಟ – ಮೊದಲ ದಿನದ ಗಳಿಕೆ 9.00 ಕೋಟಿ ರೂ.
  • ದೇ ದೇ ಪ್ಯಾರ್ ದೇ 2: 25,000 ಟಿಕೆಟ್ ಮಾರಾಟ – ಮೊದಲ ದಿನದ ಗಳಿಕೆ 8.25 ಕೋಟಿ ರೂ.
  • ಪತಿ ಪತ್ನಿ ಔರ್ ವೋ 2: 13,500 ಟಿಕೆಟ್ ಮಾರಾಟ – ಮೊದಲ ದಿನದ ಗಳಿಕೆ 3.75 ಕೋಟಿ ರೂ.
  • ಹೈ ಜವಾನಿ ತೋ ಇಷ್ಕ್ ಹೋನಾ ಹೈ: 25,000 ಟಿಕೆಟ್ ಮಾರಾಟ ಮಾಡುವ ನಿರೀಕ್ಷೆ ಇದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular