HomeEntertainment'ಕೃಷ್ಣಂ ಪ್ರಣಯ ಸಖಿ' ಚಿತ್ರದ 'ಹೇ ಗಗನ' ವಿಡಿಯೋ ಹಾಡು ರಿಲೀಸ್

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ಹೇ ಗಗನ’ ವಿಡಿಯೋ ಹಾಡು ರಿಲೀಸ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’  ಭರ್ಜರಿ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ  ಗಳಿಕೆ ಮಾಡಿದೆ. ಈ ಚಿತ್ರದ ‘ಹೇ ಗಗನ’  ಎಂಬ ಸುಂದರ ಸಾಲುಗಳುಳ್ಳ ಲಿರಿಕಲ್ ಹಾಡು ಈಗಾಗಲೇ ಎಲ್ಲರ ಗಮನ ಸೆಳೆದಿದ್ದು, ಇದರ ಸಂಪೂರ್ಣ ವಿಡಿಯೋ ಹಾಡು ಇದೀಗ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಸೋನು ನಿಗಮ್ ಹಾಗೂ ಚಿನ್ಮಯ್ ಶ್ರೀಪಾದ ಈ ಹಾಡಿಗೆ ಧ್ವನಿಯಾಗಿದ್ದು,  ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಡಾ. ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.

ಶ್ರೀನಿವಾಸ ರಾಜು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು  ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪ್ರಶಾಂತ್ ರುದ್ರಪ್ಪ ನಿರ್ಮಾಣ ಮಾಡಿದ್ದು, ಗೋಲ್ಡನ್ ಸ್ಟಾರ್ ಗಣೇಶ್,  ಶಾರಣ್ಯ ಶೆಟ್ಟಿ ಮತ್ತು ಮಾಳ್ವಿಕಾ ನಾಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ವಿಜಯ್ ಈಶ್ವರ್ ಸಂಭಾಷಣೆ, ವೆಂಕಟ್ ರಾಮ ಪ್ರಸಾದ್ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular