HomeKarnatakaSHOCKING NEWS: ಮಹಿಳಾ ಎಸ್ ಡಿಎ ಅಧಿಕಾರಿ ಆತ್ಮಹತ್ಯೆ

SHOCKING NEWS: ಮಹಿಳಾ ಎಸ್ ಡಿಎ ಅಧಿಕಾರಿ ಆತ್ಮಹತ್ಯೆ

ಹಾಸನ: ಎಸ್ ಡಿಎ ಮಹಿಳಾ ಅಧಿಕಾರಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ರಕ್ಷಣಾಪುರಂ ನಲ್ಲಿ ನಡೆದಿದೆ.

31 ವರ್ಷದ ಸುಚಿತ್ರಾ ಮೃತ ಮಹಿಳೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮ್ ಒನ್ ಕೇಂದ್ರದಲ್ಲಿ ಎಸ್ ಡಿಎ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಚಿತ್ರಾ ಅವರ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪತಿಯ ಹುದ್ದೆಯನ್ನು ಪತ್ನಿಗೆ ನೀಡಲಾಗಿತ್ತು. ಆದರೆ ಈಗ ಏಕಾಏಕಿ ರಕ್ಷಣಾಪುರಂ ಬಡಾವಣೆಯ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.

ಎಸ್ ಡಿಎ ಅಧಿಕಾರಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular