HomeKarnatakaBIG NEWS: 'ಇಂಡಿಯಾ' ಪಕ್ಷದ ಸೀಟು ಗೆಲ್ಲಲು ಕಾಂಗ್ರೆಸ್, ತಮಿಳುನಾಡಿಗೆ ಕರ್ನಾಟಕವನ್ನೇ ಅಡವಿಟ್ಟಿದೆ; ಹೆಚ್.ಡಿ.ರೇವಣ್ಣ ವಾಗ್ದಾಳಿ

BIG NEWS: ‘ಇಂಡಿಯಾ’ ಪಕ್ಷದ ಸೀಟು ಗೆಲ್ಲಲು ಕಾಂಗ್ರೆಸ್, ತಮಿಳುನಾಡಿಗೆ ಕರ್ನಾಟಕವನ್ನೇ ಅಡವಿಟ್ಟಿದೆ; ಹೆಚ್.ಡಿ.ರೇವಣ್ಣ ವಾಗ್ದಾಳಿ

ಕಲಬುರ್ಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ‘ಎ’ ಟೀಂ, ‘ಬಿ’ ಟೀಂ ಆಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ಇಂಡಿಯಾ ಪಕ್ಷದ ಸೀಟುಗಳನ್ನು ಗೆಲ್ಲಲು ತಮಿಳುನಾಡಿಗೆ ಕರ್ನಾಟಕವನ್ನು ಅಡವಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಕಾಂಗ್ರೆಸ್ ನಿಂದ ಆಪರೇಷನ್ ಹಸ್ತ ವಿಚಾರವಾಗಿ ಪ್ರತಿಕ್ರಿಯಿಸಿದ ರೇವಣ್ಣ, ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. 1991ರಿಂದ ರಾಜಕೀಯ ನೋಡುತ್ತಿದ್ದೇನೆ. ಆಪರೇಷನ್ ಕೈಗೆ ನಾವು ಹೆದರಲ್ಲ. ಕಾಂಗ್ರೆಸ್ ನವರು ಕೋಮುವಾದಿಗಳನ್ನು ದೂರ ಇಡಬೇಕು ಅಂತಾರೆ ಆದರೆ ನಮ್ಮನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular