HomeKarnatakaBIG NEWS: ನಾನು ಸಿಎಂ ಸಿದ್ದರಾಮಯ್ಯಗೆ ವಿಲನ್ನೇ, ಇನ್ನೇನು ಸ್ನೇಹಿತನಾಗಲು ಸಾಧ್ಯವೇ?; ಟಾಂಗ್ ನೀಡಿದ HDK

BIG NEWS: ನಾನು ಸಿಎಂ ಸಿದ್ದರಾಮಯ್ಯಗೆ ವಿಲನ್ನೇ, ಇನ್ನೇನು ಸ್ನೇಹಿತನಾಗಲು ಸಾಧ್ಯವೇ?; ಟಾಂಗ್ ನೀಡಿದ HDK

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರ ವಿರುದ್ಧವೂ ರಾಜಕೀಯ ಕದನಕ್ಕಿಳಿದಿದ್ದಾರೆ. ಕಾಂಗ್ರೆಸ್ ನಾಯಕರ ಸವಾಲು ಸ್ವೀಕರಿಸಿರುವ ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಸಿದ್ಧ ಡೇಟ್ ಫಿಕ್ಸ್ ಮಾಡಲಿ ಎಂದು ಖಡಕ್ ಆಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಕಿಡಿ ಕಾರಿದರು. ರಾಜಕೀಯ ವಿಲನ್ ಅಂತಾ ಯಾರಾದ್ರೂ ಇದ್ರೆ ಅದು ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಎಂದು ಹೇಳಿದ್ದಾರೆ. ಹೌದು ನಾನು ಅವರಿಗೆ ರಾಜಕೀಯ ವಿಲನ್ನೇ. ಇನ್ನೇನು ಸ್ನೇಹಿತನಾಗಲು ಆಗುತ್ತಾ? ಎಂದು ಟಾಂಗ್ ಕೊಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರ ತಪ್ಪುಗಳನ್ನೆಲ್ಲ ನಾನು ಜನತೆಯ ಮುಂದೆ ಹೇಳುತ್ತಿದ್ದೇನಲ್ಲ. ಆ ಕಾರಣಕ್ಕಾಗಿ ನಾನು ಅವರಿಗೆ ವಿಲನ್ನೇ. ನಾನು ಯಾವುದೇ ರಾಜಿಗೆ ಒಳಗಾಗಿಲ್ಲ. ಹಾಗಾಗಿ ವಿಲನ್ ಎಂದು ಹೇಳಿದ್ದಾರೆ.

ಕಳೆದ 5 ತಿಂಗಳಲ್ಲಿ ವರ್ಗಾವಣೆಯಲ್ಲಿ ಯಾವುದೇ ಹಣವನ್ನೂ ಪಡೆದಿಲ್ಲ ಎಂದು ಸಿಎಂ, ಡಿಸಿಎಂ, ಸಚಿವರು ಬಂದು ಪ್ರಮಾಣ ಮಾಡಲಿ. ವರ್ಗಾವಣೆ ವಿಚಾರದಲ್ಲಿ ಯಾವುದೇ ಲಂಚವನ್ನೂ ಪಡೆದಿಲ್ಲ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

For Latest News Updates, Join Our Whatsapp Community🚩
RELATED ARTICLES

Most Popular