HomeKarnatakaBIG NEWS: ಪೂಜೆಯ ವೇಳೆ ಕರೆ ಮಾಡಿದ HDK; ಶುಭ ಸುದ್ದಿ ಬಂದಿದೆ ಎಂದ ಕೆ.ಎಸ್....

BIG NEWS: ಪೂಜೆಯ ವೇಳೆ ಕರೆ ಮಾಡಿದ HDK; ಶುಭ ಸುದ್ದಿ ಬಂದಿದೆ ಎಂದ ಕೆ.ಎಸ್. ಈಶ್ವರಪ್ಪ

ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಹುತೇಕ ಖಚಿತವಾಗಿದೆ. ಮೈತ್ರಿ ವಿಚಾರವಾಗಿ ಮಾತನಾಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕುಮಾರಸ್ವಾಮಿಯಿಂದ ಶುಭ ಸುದ್ದಿ ಬಂದಿದೆ ಎಂದು ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ಕರೆ ಮಾಡಿ ಶುಭ ಸುದ್ದಿ ನೀಡಿದ್ದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಇಂದು ಮನೆ ದೇವರು ಮಲ್ಲೇಶ್ವರ, ಚೌಡೇಶ್ವರಿ ದೇವಿಯ ವಿಶೇಷ ಪೂಜೆ ಮಾಡುತ್ತಿದ್ದೆವು. ಪೂಜೆಗೂ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿಯವರು ಕರೆ ಮಾಡಿ ಶುಭ ಸುದ್ದಿ ನೀಡಿದ್ದಾರೆ. ಹಿಂದೂ ಧರ್ಮದ ಪ್ರಕಾರ ಪೂಜೆಯಂತಹ ವಿಶೇಷ ಸಂದರ್ಭದಲ್ಲಿ ಒಳ್ಳೆಯ ಸುದ್ದಿ ಬಂದರೆ ಯಶಸ್ಸು ಸಿಗುತ್ತೆ ಎಂಬ ನಂಬಿಕೆಯಿದೆ. ಹಾಗಾಗಿ ಇದೊಂದು ಶುಭ ಸೂಚಕ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular