HomeKarnatakaHDK-D.K.ಶಿವಕುಮಾರ್ ಅಣ್ಣ-ತಮ್ಮ ವಾರ್; ಮುಂದಿನ ಜನ್ಮದಲ್ಲೂ ಅವರು ನನಗೆ ತಮ್ಮ ಆಗೋದು ಬೇಡ ಎಂದ ಕುಮಾರಸ್ವಾಮಿ

HDK-D.K.ಶಿವಕುಮಾರ್ ಅಣ್ಣ-ತಮ್ಮ ವಾರ್; ಮುಂದಿನ ಜನ್ಮದಲ್ಲೂ ಅವರು ನನಗೆ ತಮ್ಮ ಆಗೋದು ಬೇಡ ಎಂದ ಕುಮಾರಸ್ವಾಮಿ

ಬೆಂಗಳೂರು: ವರ್ಗಾವಣೆ ದಂಧೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಪಾಪ ಕುಮಾರಸ್ವಾಮಿ ಏನೋ ಹೇಳ್ತಾರೆ… ಮಾತನಾಡಲಿ ಬಿಡಿ… ಅಣ್ಣ ಹೇಳ್ತಾರೆ ತಮ್ಮ ಕೇಳಬೇಕು… ಎಂದು ವ್ಯಂಗ್ಯವಾಡಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿರುವ ಹೆಚ್.ಡಿ.ಕುಮಾರಸ್ವಾಮಿ, ಅವರಂತ ತಮ್ಮ ನನಗೆ ಯಾರೂ ಇಲ್ಲ ಎಂದಿದ್ದಾರೆ.

ಅಣ್ಣ ಹೇಳ್ತಾರೆ ತಮ್ಮ ಕೇಳಬೇಕು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಈ ಜನ್ಮದಲ್ಲಿ ಅವರಂತಹ ತಮ್ಮ ಯಾರೂ ನನಗಿಲ್ಲ. ಮುಂದಿನ ಜನ್ಮದಲ್ಲಿಯೂ ಅವರು ನನಗೆ ತಮ್ಮ ಆಗೋದು ಬೇಡ ಎಂದು ತಿರುಗೇಟು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ಹಿಟ್ ಆಂಡ್ ರನ್ ಮಾಡುತ್ತೇನೆ ಎಂದಿದ್ದಾರೆ. ಯಾವುದು ಹಿಟ್ ಆಂಡ್ ರನ್? ಯಾರನ್ನೋ ದುಬೈನಿಂದ ಕರೆಸಿ ಏನೇನೋ ಮಾಡಿದ್ರಲ್ಲ? ಗೃಹ ಸಚಿವರಿಗೂ ನಿಮಗೂ ಸಂಘರ್ಷ ಆಯ್ತಲ್ಲ? ವರ್ಗಾವಣೆ ಪ್ರಕ್ರಿಯೆ ಆಗುವಾವಗ ನಿಮ್ಮ ಜೊತೆ ಯಾರು ಯಾರಿದ್ರು? ಎಲ್ಲ ನಮಗೆ ಗೊತ್ತಿದೆ. ಗುತ್ತಿಗೆದಾರ ಕೆಂಪಣ್ಣ ಈಗ ಎಲ್ಲಿಗೆ ಹೋಗಿದ್ದಾರೆ? ನಿನ್ನೆ ಬೆಳಿಗ್ಗೆ ನಡೆದಿರುವ ಘಟನೆ 710 ಕೋಟಿ ಬಿಡಿಗಡೆಯಾಗಬೇಕಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮುಗಿಬಿದ್ದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular