HomeKarnatakaಕೊಟ್ಟ ಕುದುರೆಯನೇರದವ.....ಎಂದ ಸಿಎಂ ಸಿದ್ದರಾಮಯ್ಯ: ನನಗೆ ಅವರು ಯಾವ ಕುದುರೆ ಕೊಟ್ಟಿದ್ರು? ಎಂದು HDK ತಿರುಗೇಟು

ಕೊಟ್ಟ ಕುದುರೆಯನೇರದವ…..ಎಂದ ಸಿಎಂ ಸಿದ್ದರಾಮಯ್ಯ: ನನಗೆ ಅವರು ಯಾವ ಕುದುರೆ ಕೊಟ್ಟಿದ್ರು? ಎಂದು HDK ತಿರುಗೇಟು

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿವೃದ್ಧಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿದ್ದವು ಆದರೂ ರಾಜ್ಯದ ಜನತೆಗಾಗಿ ಯಾವುದೇ ಕೆಲಸ ಮಾಡಿಲ್ಲ. ಕೊಟ್ಟ ಕುದುರೆಯನೇರದವ ವೀರನೂ ಅಲ್ಲ ಶೂರನೂ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದರು. ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನನಗೆ ಅವರು ಯಾವ ಕುದುರೆ ಕೊಟ್ಟಿದ್ರು? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಿದ್ದಾಗ 14 ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕಳೆದ 15 ತಿಂಗಳಲ್ಲಿ ಇವರು ಏನ್ ಸಾಧನೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಈಗ ಕೊಟ್ಟ ಕುದುರೆಯನೇರವದ ಎಂದು ಸಿಎಂ ಸಿದ್ದರಾಮಯ್ಯ ನನಗೆ ಹೇಳಿದ್ದಾರೆ. ನನಗೆ ಇವರು ಯಾವ ಕುದುರೆ ಕೊಟ್ಟಿದ್ರು? ಮುಡಾ ವಿಚಾರ ಡೈವರ್ಟ್ ಮಾಡಲೆಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular