HomeIndiaBIG NEWS: ಮಂತ್ರಿ ಸ್ಥಾನ ಬೇಕೆಂದು ನಾನು ಒತ್ತಡ ಹಾಕುವುದಿಲ್ಲ ಎಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

BIG NEWS: ಮಂತ್ರಿ ಸ್ಥಾನ ಬೇಕೆಂದು ನಾನು ಒತ್ತಡ ಹಾಕುವುದಿಲ್ಲ ಎಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ನವದೆಹಲಿ: ನನಗೆ ಮಂತ್ರಿ ಸ್ಥಾನ ಬೇಕೆಂದು ನಾನು ಒತ್ತಡ ಹಾಕುವುದಿಲ್ಲ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೆ ಸರ್ಕಾರ ಮುಂದುವರೆಯಲಿದೆ ಎಂದು ಹೇಳಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಚಿವ ಸ್ಥಾನದ ಬಗ್ಗೆ ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ಸ್ಥಳೀಯ ಪಕ್ಷಗಳಿಗೂ ಖಾತೆ ಕೊಡುತ್ತಾರೆ. ನಮ್ಮಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎನ್ನುವುದು ಹೈಕಮಾಂಡ್ ಗೆ ಗೊತ್ತಿದೆ ಎಂದರು.

ನಾಡಿನ ಜನತೆಗೆ, ದೇಶಕ್ಕೆ ಒಳ್ಳೆಯದಾಗುವ ಖಾತೆ ಸಿಕ್ಕಿದರೆ ಉತ್ತಮವಾಗಿ ಕೆಲಸ ಮಾಡಬಹುದು. ಡಾ.ಮಂಜುನಾಥ್ ಗೆ ಖಾತೆ ನೀಡುವ ಬಗ್ಗೆ ಅವರೇ ತೀರ್ಮಾನ ಮಾಡ್ತಾರೆ. ನಾನು ಮಂತ್ರಿ ಸ್ಥಾನಕ್ಕಾಗಿ ಯಾವುದೇ ಒತ್ತಡ ಹಾಕಿಲ್ಲ. ಅವರು ಜವಾಬ್ದಾರಿ ನೀಡಿದರೆ ನಿರ್ವಹಿಸುತ್ತೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular