HomeKarnatakaBIG NEWS: ಈಸ್ಟ್ ಇಂಡಿಯಾ ಕಂಪನಿ ತರ ಲೂಟಿ ಮಾಡುವುದು ಈಗಿನ ಕಾಂಗ್ರೆಸ್ ಕೆಲಸ; ಮಾಜಿ...

BIG NEWS: ಈಸ್ಟ್ ಇಂಡಿಯಾ ಕಂಪನಿ ತರ ಲೂಟಿ ಮಾಡುವುದು ಈಗಿನ ಕಾಂಗ್ರೆಸ್ ಕೆಲಸ; ಮಾಜಿ ಸಿಎಂ HDK ಆರೋಪ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನ್ನು ಮುಗಿಸುವುದೇ ಇವರ ಉದ್ದೇಶ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಮುಳುಗಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಶಾಪ ಹಾಕಿದ್ದಾರೆ. ಅವರ ಶಾಪವೇ ಆಶಿರ್ವಾದ ಎಂದು ಭಾವಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ದೇವೇಗೌಡರು ವಿರೋಧಿಗಳಿಗೂ ಶಾಪ ಹಾಕಿದವರಲ್ಲ. ಹೀಗಿರುವಾಗ ಇಂತಹ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನವರ ನಡವಳಿಕೆಯನ್ನು ನಾಡಿನ ಜನ ಸಮಾಪ್ತಿ ಮಾಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಗಾಂಧಿ ಕಟ್ಟಿದ ಕಾಂಗ್ರೆಸ್ ಪಕ್ಷ. 135 ವರ್ಷಗಳ ಇತಿಹಾಸವಿರುವ ಪಕ್ಷ ನಮ್ಮದು ಎಂದಿದ್ದಾರೆ. ಆದರೆ ಗಾಂಧಿ ಕಟ್ಟಿದ ಕಾಂಗ್ರೆಸ್ ನ ಆಗಿನ ಇತಿಹಾಸ ಬೇರೆ. ಈಗ ಈಸ್ಟ್ ಇಂಡಿಯಾ ಕಂಪನಿ ತರ ದರೋಡೆ ಕಾಂಗ್ರೆಸ್ ಆಗಿದೆ. ಹಿಂದಿನ ಕಾಂಗ್ರೆಸ್ ನವರು ಆಸ್ತಿ ಪಾಸ್ತಿ ಮಾರಿ ಪಕ್ಷ ಕಟ್ಟಿದ್ದರು. ಆದರೆ ಈಗಿನವರು ಈಸ್ಟ್ ಇಂಡಿಯಾ ಕಂಪನಿ ತರ ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular