BIG NEWS: ಸಾಯುವ ಮುನ್ನ ನಿಮ್ಮ ಋಣ ತೀರಿಸುವೆ, ನಿಮ್ಮ ಹೃದಯದಲ್ಲಿ ಸ್ಥಾನ ಕೊಡಿ…. ಮಂಡ್ಯ ಜನತೆ ಮುಂದೆ ಮತ್ತೆ ಕಣ್ಣೀರಾದ ಕೇಂದ್ರ ಸಚಿವ ಕುಮಾರಸ್ವಾಮಿ

ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಮತ್ತೆ ಮಂಡ್ಯ ಜನತೆಯ ಮುಂದೆ ಭಾವುಕರಾದ ಘಟನೆ ನಡೆದಿದೆ. ನನಗೆ ನಾನು ಮಾಡುವ ಸಾಧನೆಗೆ ಹೆಸರು ಬೇಡ. ನಿಮ ಹೃದಯದಲ್ಲಿ ಕೊಟ್ಟ ಸ್ಥಾನ ಸಾಕು. ನಾನು ಸಾಯುವ ಮುನ್ನ ನಿಮ್ಮ ಋಣ ತೀರಿಸುತ್ತೇನೆ ಎಂದು ಕಣ್ಣೀರಾದರು.

ಮಂಡ್ಯದ ಮೈಶುಗರ್ ಶಾಲಾ ಕಾರ್ಯಾಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಸಾವಿನ ಬಗ್ಗೆ ಮಾತನಾಡುತ್ತಾ, ಜನರ ಋಣ ತೀರಿಸುವುದಾಗಿ ಹೇಳಿದರು. ನಮ್ಮ ಸಾಧನೆಗಿಂತ ಜನರ ಪ್ರೀತಿ ಮುಖ್ಯ. ನಿಮ್ಮ ಹೃದಯದಲ್ಲಿ ಸ್ಥಾನ ಕೊಡಿ ಸಾಕು. ನಿಮ್ಮ ಋಣವನ್ನು ನಾನು ಸಾಯುವ ಮುನ್ನ ತೀರಿಸುವೆ ಎಂದು ಭಾವುಕರಾಗಿ ನುಡಿದರು.

ಇದೇ ವೇಳೆ ಮಂಡ್ಯದಲ್ಲಿ ನಡೆದ ವೈದ್ಯರ ನಿರ್ಲಕ್ಷಕ್ಕೆ ಬಾಲಕಿ ಸಾವು ಹಾಗೂ ಸಂಚಾರಿ ಪೊಲೀಸರ ಎಡವಟ್ಟಿಗೆ ಮಗು ಬಲಿ ಪ್ರಕರಣದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಿರ್ಲಕ್ಷವೇ ಈ ಸಾವುಗಳಿಗೆ ಕಾರಣ. ಸರ್ಕಾರ ಸಾವಿಗೆ ಪರಿಹಾರ ಘೋಷಿಸಿ ಎಲ್ಲವನ್ನೂ ಹಣದಿಂದ ಅಳೆಯಲು ಹೊರಟಿದೆ. ಮನುಷ್ಯನ ಜೀವದ ಬೆಲೆಯನ್ನು ಮೊದಲು ಅರ್ಥಮಾಡಿಕೊಳ್ಳಲಿ ಎಂದು ಕಿಡಿಕಾರಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read