ಮಡಿಕೇರಿ: ಬೈಕ್ ಹಾಗೂ ಜೀಪ್ ಗಳಿಗೆ ಕರ್ಕಶ ಶಬ್ಧ ಬರುವಂತೆ ಮಾಡಿ ಜನರಿಗೆ ಕಿರುಕಿರಿ ಉಂಟು ಮಾಡುತ್ತಾ ಓಡಾಡಿದರೆ ಕೆಲವರಿಗೆ ಅದೇನೋ ವಿಲಕ್ಷಣ ಸಂತಸ. ಇಂತಹ ಮನಸ್ಥಿತಿಯ ಹಲವರು ಆಗಾಗ ಏರಿಯಾಗಳಲ್ಲಿ ತೊಂದರೆ ಕೊಡುತ್ತಲೇ ಇರುತ್ತಾರೆ. ಕಿವಿಗಡಚಿಕ್ಕುವ ಕರ್ಕಶ ಶಬ್ದಗಳಿಂದ ತೊಂದರೆ ಅನುಭವಿಸಿದರೂ ಅನಸ್ಸಿನಲ್ಲಿಯೇ ಹಿಡಿಶಾಪ ಹಾಕುತ್ತಾ ಸ್ಥಳೀಯರು ಸುಮ್ಮನಿರುವುದೇ ಹೆಚ್ಚು. ಇಂತದ್ದೇ ಕರ್ಕರ ಶಬ್ಧಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಜೀಪ್ ವೊಂದನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಸದಾ ಕಾಲ ಜೀಪ್ ಗೆ ಕರ್ಕಶ ಶಬ್ಧ ಅಳವಡಿಸಿ ಓಡಾಡುತ್ತಾ ಸಾರ್ವಜನಿಕರಿಗೆ, ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಜೀಪ್ ವೊಂದನ್ನು ಕೊಡಗು ಜಿಲ್ಲೆಉಅ ಮಡಿಕೇರಿ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಡಿಕೇರಿ ನಗರದಲ್ಲಿ ಜೀಪ್ ವೊಂದು ರೇಸಿಂಗ್ ಸ್ಪೀಡ್ ನಲ್ಲಿ ಸಂಚರಿಸುತ್ತಾ, ಭಾರಿ ಶಬ್ಧಗಳೊಂದಿಗೆ ತೊಂದರೆ ಕೊಡುತ್ತಿತ್ತು. ಈ ಬಗ್ಗೆ ಹಲವರು ಪೊಲೀಸರಿಗೆ ದೂರು ನೀಡಿದ್ದರು. ಜೀಪ್ ವಾಹನ ಕಾಲೇಉ ರಸ್ತೆಯಿಂದ ಮಡಿಕೇರಿ ನಗರದತ್ತ ಬರುತ್ತಿದದಗ ಪೊಲೀಸರು ತಡೆದಿದ್ದಾರೆ.
ಹೀಗೆ ಜೀಪ್ ತಡೆದವರೇ ವಶಕ್ಕೆ ಪಡೆದುಕೊಂಡಿದ್ದಾರೆ. 281 BNS 2023, 52, 53(1), 192,184, 189 2 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ವಾಹನಗಳ ಮೂಲ ಸ್ವರೂಪ ಬದಲಾಯಿಸಿ ಅನಧಿಕೃತವಾಗಿ ಸೈಲೆನ್ಸರ್, ಹಾರ್ನ್ ಗಳನ್ನು ಅಳವಡಿಸಿ ಕರ್ಕಶ ಶಬ್ಧಗಳನ್ನು ಅಳವಡಿಸಿಕೊಂಡು ಓಡಾಟ ನಡೆಸುವುದು ಆರ್ ಸಿ ನಿಯಮ ಉಲ್ಲಂಘನೆಯಾಗಿದೆ. ಇದರೊಂದಿಗೆ ವ್ಹೀಲಿಂಗ್ ಮಾಡುವುದು ಸಂಚಾರಿ ನಿಯಮ ಉಲ್ಲಂಘನೆ. ಇಂತಹ ಪ್ರಕರಣ ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಕೊಡಗು ಜಿಲ್ಲಾ ಎಸ್ ಪಿ ಬಿಂದುಮಣಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

