HomeIndiaಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ: ಐವರು ಶಂಕಿತ ಉಗ್ರರು ಅರೆಸ್ಟ್; ಟೈಮ್ ಬಾಂಬ್ ತಯಾರಿಸುವ ಸಿದ್ಧತೆ ನಡೆಸಿದ್ದ...

ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ: ಐವರು ಶಂಕಿತ ಉಗ್ರರು ಅರೆಸ್ಟ್; ಟೈಮ್ ಬಾಂಬ್ ತಯಾರಿಸುವ ಸಿದ್ಧತೆ ನಡೆಸಿದ್ದ ಆರೋಪಿಗಳು

ಗಾಂಧಿನಗರ: ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಐವರು ಶಂಕಿತ ಉಗ್ರರನ್ನು ಗುಜರಾತ್ ಉಗ್ರನಿಗ್ರಹ ದಳ (ATS) ಬಂಧಿಸಿದೆ.

ಬಂಧಿತರನ್ನು ಬಿಲಾಲ್ ಅಬಿದ್ ಶೇರಾ, ಮೊಹಮ್ಮದ್ ಆಯೂಬ್ ಖಾಡಿವಾಲ್, ಮೊಹಮ್ಮದ್ ಶಾಪಿ ಮುಖಿ, ಮೊಹಮ್ಮದ್ ಹಸನ್ ಕರಾಡಿಯಾ ಮತ್ತು ಮೊಹಮ್ಮದ್ ಆಯೂಬ್ ಸುನಾಸರಾ ಎಂದು ಗುರುತಿಸಲಾಗಿದೆ. ಬಂಧಿತರಲ್ಲಿ ಒಬ್ಬ ಟೈಮ್ ಬಾಂಬ್ ತಯಾರಿಸುವ ಸಿದ್ಧತೆ ನಡೆಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಬಂಧಿತರೆಲ್ಲರೂ ಪಾಕ್ ಮೂಲದ ಜೈಶ್ ಸಂಘಟನೆಯ ಸದಸ್ಯರಾಗಿದ್ದು, ಸ್ಫೋಟಕ ಸಾಧನಗಳನ್ನು ಪರೀಕ್ಷಿಸುವ ಕೃತ್ಯದಲ್ಲಿ ತೊಡಗಿದ್ದರು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ಎಟಿಎಸ್ ಈ ಪ್ರಕರಣ ಸಂಬಂಧ 8 ಮಂದಿಯನ್ನು ಬಂಧಿಸಿತ್ತು. ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಸಂಪರ್ಕಿಸಿ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಐವರು ಶಂಕಿತರನ್ನು ಈ ಹಿಂದೆ ಬಂಧಿಸಲಾಗಿದ್ದ ಉಗ್ರ ಘಟಕದ ಸದಸ್ಯರ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಪತ್ತೆಹಚ್ಚಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಈ ಪ್ರಕರಣದಲ್ಲಿ ಈ ಹಿಂದೆ ನಡೆದ ತನಿಖೆಯಲ್ಲಿ ಬಂಧಿತರಿಗೆ ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳಿಂದ ಹಣಕಾಸಿನ ನೆರವು ದೊರೆಯುತ್ತಿತ್ತು ಎಂಬುದು ಬಹಿರಂಗವಾಗಿತ್ತು. ಅಲ್ಲದೆ, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಂತೆ ಹ್ಯಾಂಡ್ಲರ್‌ಗಳು ಸೂಚನೆ ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಎಟಿಎಸ್ ಅಧಿಕಾರಿಗಳ ಪ್ರಕಾರ, ಬಂಧಿತರಲ್ಲಿ ಒಬ್ಬನಿಗೆ ಸ್ಫೋಟಕಗಳ ಕುರಿತು ಉತ್ತಮ ಜ್ಞಾನವಿದ್ದು, ಆತ ಕಾರ್ಯನಿರ್ವಹಿಸುವ ಟೈಮ್ ಬಾಂಬ್ ನಿರ್ಮಿಸುವ ಅಂತಿಮ ಹಂತದಲ್ಲಿದ್ದ. ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಎಟಿಎಸ್ ತಂಡ, ಬಾಂಬ್ ತಯಾರಿ ಸಿದ್ಧತೆ ವಿಫಲಗೊಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular