HomeAutoVideo : ವಾಹನ ಚಾಲನೆ ಮಾಡುವಾಗ ಎಷ್ಟು ಎಚ್ಚರದಿಂದಿದ್ದರೂ ಸಾಲದು; ಕಾರು ಹರಿದು ಪುಟ್ಟ ಬಾಲಕಿ...

Video : ವಾಹನ ಚಾಲನೆ ಮಾಡುವಾಗ ಎಷ್ಟು ಎಚ್ಚರದಿಂದಿದ್ದರೂ ಸಾಲದು; ಕಾರು ಹರಿದು ಪುಟ್ಟ ಬಾಲಕಿ ಸಾವು

ಗುಜರಾತ್‌ನ ಮೆಹ್ಸಾನಾದ ಸ್ಪರ್ಶ್ ವಿಲ್ಲಾ ಸೊಸೈಟಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.  ಸೈಕಲ್ ಸವಾರಿ ಮಾಡುತ್ತಿದ್ದ 4 ವರ್ಷದ ಬಾಲಕಿ ಮೇಲೆ ಕಾರು ಹರಿದಿದೆ. ಇದರಿಂದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೊಸೈಟಿಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳ ಪ್ರಕಾರ, ಸೊಸೈಟಿಯೊಳಗೆ ಬಾಲಕಿಯೊಬ್ಬಳು ಏಕಾಂಗಿಯಾಗಿ ಸೈಕಲ್ ಸವಾರಿ ಮಾಡುತ್ತಿರೋದನ್ನು ನೋಡ್ಬಹುದು. ಅಷ್ಟರಲ್ಲಿ ಕಾರೊಂದು ಬರುತ್ತದೆ. ಸ್ವಲ್ಪ ತಿರುವಿರುವ ಕಾರಣ, ಕಾರು ಬರ್ತಿದ್ದಂತೆ ಭಯಗೊಂಡ ಬಾಲಕಿ ಸೈಕಲ್‌ ನಿಂದ ಕೆಳಗೆ ಬೀಳ್ತಾಳೆ. ಅಷ್ಟರಲ್ಲೇ ಕಾರು, ಬಾಲಕಿ ಮೇಲೆ ಹರಿಯುತ್ತದೆ. ಕಾರಿನಡಿ ಸಿಲುಕಿದ ಬಾಲಕಿ ಅಲ್ಲೇ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು 4 ವರ್ಷದ ದಿಶಾ ಪಟೇಲ್ ಎಂದು ಗುರುತಿಸಲಾಗಿದೆ.

ಬಾಲಕಿ ಸೈಕಲ್ ಸಮೇತ ಕೆಳಗೆ ಬಿದ್ದಾಗ ಕಾರು ಚಾಲಕ ಬ್ರೇಕ್ ಹಾಕಿದ್ದರೆ ಆಕೆಯ ಪ್ರಾಣ ಉಳಿಯುತ್ತಿತ್ತು.  ಕಾರು ಚಾಲಕನ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನಲಾಗಿದೆ. ಬಾಲಕಿ ಕೆಳಗೆ ಬಿದ್ದಿರೋದು ಚಾಲಕನಿಗೆ ಕಾಣಿಸಿದೆ ಎಂದು ಕೆಲವರು ಆರೋಪಿಸಿದ್ದಾರೆ. ಸದ್ಯ ಕಾರು ಚಾಲಕನ ವಿವರ ಪತ್ತೆಯಾಗಿಲ್ಲ. ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular