HomeAgricultureಹಸುವಿನ ಮೇಲೆ ಸಿಂಹದ ದಾಳಿ; ಜೀವದ ಹಂಗು ತೊರೆದು ರಕ್ಷಿಸಿಕೊಂಡ ರೈತ

ಹಸುವಿನ ಮೇಲೆ ಸಿಂಹದ ದಾಳಿ; ಜೀವದ ಹಂಗು ತೊರೆದು ರಕ್ಷಿಸಿಕೊಂಡ ರೈತ

ಸಿಂಹದ ದಾಳಿಯಿಂದ ತನ್ನ ಹಸುವನ್ನು ರೈತರೊಬ್ಬರು ಧೈರ್ಯದಿಂದ ಎದುರಿಸಿ ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಗುಜರಾತ್‌ನ ಜುನಾಗಢ್‌ನಲ್ಲಿರುವ ಕೇಶೋಡ್‌ನ ಕಾರ್ಪೊರೇಟರ್ ವಿವೇಕ್ ಕೊಟಾಡಿಯಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಟಾಡಿಯಾ ಅವರ ಟ್ವೀಟ್ ಪ್ರಕಾರ, ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಸಿಂಹವು ಹಸುವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಇದನ್ನು ಕಂಡ ರೈತ ಹಸುವಿನ ಬಳಿಗೆ ಬರುತ್ತಾ ಅದನ್ನು ಸಿಂಹದ ದಾಳಿಯಿಂದ ರಕ್ಷಿಸಲು ಯತ್ನಿಸುತ್ತಾರೆ. ಸಿಂಹವನ್ನು ಬೆದರಿಸ್ತಿದ್ದಂತೆ ಅದು ಹಸುವನ್ನು ಬಿಟ್ಟುಬಿಡುತ್ತದೆ. ಸಿಂಹವನ್ನು ಹೆದರಿಸಲು ಧೈರ್ಯದಿಂದ ಪ್ರಯತ್ನಿಸುತ್ತಿರುವ ರೈತನ ವಿಡಿಯೋವನ್ನ ಇದೇ ದಾರಿಯಲ್ಲಿ ಹೋಗ್ತಿದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular