HomeLatest Newsಅಯೋಧ್ಯೆ ಶ್ರೀರಾಮನಿಗೆ 11 ಕಿರೀಟ, ಚಿನ್ನದ ಬಿಲ್ಲು –ಬಾಣ ಸೇರಿ ಭಾರೀ ದುಬಾರಿ ಮಾಣಿಕ್ಯ, ಚಿನ್ನಾಭರಣ,...

ಅಯೋಧ್ಯೆ ಶ್ರೀರಾಮನಿಗೆ 11 ಕಿರೀಟ, ಚಿನ್ನದ ಬಿಲ್ಲು –ಬಾಣ ಸೇರಿ ಭಾರೀ ದುಬಾರಿ ಮಾಣಿಕ್ಯ, ಚಿನ್ನಾಭರಣ, 30ಕೆಜಿ ಬೆಳ್ಳಿ ಅರ್ಪಿಸಿದ ವಜ್ರ ವ್ಯಾಪಾರಿ

ನವದೆಹಲಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಗುಜರಾತ್ ಮೂಲದ ವಜ್ರ ವ್ಯಾಪಾರಿ 11 ಕಿರೀಟಗಳು ಮತ್ತು ಚಿನ್ನದ ಬಿಲ್ಲು ಮತ್ತು ಬಾಣ ಸೇರಿದಂತೆ ದುಬಾರಿ ಆಭರಣಗಳ ಸಂಗ್ರಹವನ್ನು ದಾನ ಮಾಡಿದ್ದಾರೆ.

ವಿಶ್ವ ಹಿಂದೂ ಪರಿಷತ್(ವಿಹೆಚ್‌ಪಿ) ದೇಣಿಗೆಯಲ್ಲಿ 11 ವಜ್ರ-ಖಚಿತ ಕಿರೀಟಗಳು, 30 ಕಿಲೋಗ್ರಾಂಗಳಷ್ಟು ಬೆಳ್ಳಿ, 300 ಗ್ರಾಂ ಚಿನ್ನ ಮತ್ತು ಮಾಣಿಕ್ಯಗಳು ಮತ್ತು ಇತರ ಅಲಂಕೃತ ವಸ್ತುಗಳು ಸೇರಿವೆ ಎಂದು ಹೇಳಿದೆ.

ವ್ಯಾಪಾರಿ ನೀಡಿದ ದೇಣಿಗೆಯಲ್ಲಿ ಹಾರಗಳು, ಕಿವಿಯೋಲೆಗಳು, ಅಲಂಕಾರಿಕ ಹಣೆಯ ತಿಲಕಗಳು, ಏಳು ಬಿಲ್ಲುಗಳು(ನಾಲ್ಕು ದೊಡ್ಡ ಮತ್ತು ಮೂರು ಸಣ್ಣ), ನಾಲ್ಕು ಬತ್ತಳಿಕೆಗಳು, ಮೂರು ಗದೆಗಳು ಸೇರಿವೆ ಎಂದು ವಿಹೆಚ್‌ಪಿ ರಾಷ್ಟ್ರೀಯ ಖಜಾಂಚಿ ದಿನೇಶ್ ನೆವಾಡಿಯಾ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಜ್ರ ವ್ಯಾಪಾರಿ ಮುಖೇಶ್ ಪಟೇಲ್ 11 ವಜ್ರಖಚಿತ ಕಿರೀಟಗಳು, 30 ಕಿಲೋಗ್ರಾಂಗಳಷ್ಟು ಬೆಳ್ಳಿ, 300 ಗ್ರಾಂ ಚಿನ್ನ ಮತ್ತು ಮಾಣಿಕ್ಯಗಳನ್ನು ದಾನ ಮಾಡಿದರು. ಈ ವಸ್ತುಗಳನ್ನು ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಅಯೋಧ್ಯೆಗೆ ಸಾಗಿಸಲಾಯಿತು ಎಂದು ನ್ಯೂವಾಡಿಯಾ ತಿಳಿಸಿದ್ದಾರೆ.

ಪ್ರಸಿದ್ಧ ಉದ್ಯಮಿಯಾಗಿರುವ ಪಟೇಲ್, ಸೂರತ್‌ನಲ್ಲಿ ಗ್ರೀನ್ ಲ್ಯಾಬ್ ಎಂಬ ಆಭರಣ ಸಂಸ್ಥೆಯ ಮಾಲೀಕರಾಗಿದ್ದಾರೆ. ಅವರು ತಮ್ಮ ಧಾರ್ಮಿಕ ದೇಣಿಗೆ ದಾನಗಳಿಗೆ ಹೆಸರುವಾಸಿಯಾಗಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular